ಕ್ರೈಂ

ಪದವೀಧರರ ಹೈಟೆಕ್‌ ದಂಧೆ: 12 ಕೋಟಿ ರೂಪಾಯಿ ಮೌಲ್ಯದ 1,500 ಕೆಜಿ ಗಾಂಜಾ ವಶ, ಇಬ್ಬರ ಬಂಧನ

254

ನ್ಯೂಸ್‌ ನಾಟೌಟ್‌: 12 ಕೋಟಿ ರೂಪಾಯಿ ಮೌಲ್ಯದ 1,500 ಕೆಜಿ ಗಾಂಜಾವನ್ನು ವಶಕ್ಕೆ ಪಡೆದು ಇಬ್ಬರು ಪದವೀಧರರನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರಕರಣದ ಪ್ರಮುಖ ಆರೋಪಿ ರಾಜಸ್ಥಾನದ ಮೂಲದವನಾಗಿದ್ದು, ಎಂಬಿಎ ಪದವೀಧರನಾಗಿದ್ದಾನೆ. ಎರಡನೇ ಆರೋಪಿ ಆಂಧ್ರಪ್ರದೇಶ ಮೂಲದವನಾಗಿದ್ದು, ಬಿಎ ಪದವಿ ಪಡೆದಿದ್ದ. ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಇಬ್ಬರು ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತನಿಖೆಯಲ್ಲಿ ತಿಳಿದುಬಂದಿದೆ.

ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು ಖರೀದಿಸಿ ವಿವಿಧ ರಾಜ್ಯಗಳಿಗೆ ಮಾರಾಟ ಮಾಡುವ ಜಾಲ ಹೊಂದಿದ್ದರು. ಆರೋಪಿಗಳು ಇಜುಜು ವಾಹನ ಮಾರ್ಪಾಡು ಮಾಡಿ ಕಂಪಾರ್ಟ್‌ ಮೆಂಟ್‌ಗಳಾಗಿ ಪರಿವರ್ತಿಸಿದ್ದರು. ಇದು ಸಾಗಾಟ ವೇಳೆ ಪೊಲೀಸರಿಗೆ ಅನುಮಾನ ಬಾರದಂತೆ ಮಾಡುತ್ತಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಫ್ಲಿಪ್‌ಕಾರ್ಟ್ ಬಾಕ್ಸ್‌ಗಳಲ್ಲಿ ಗಾಂಜಾವನ್ನು ಪ್ಯಾಕ್ ಮಾಡಿ ಮಾರುತ್ತಿದ್ದರು. ಅಲ್ಲದೆ ಸಾಗಾಟ ಮಾಡುವ ವಾಹನಗಳಿಗೆ ವಿಭಿನ್ನ ನೋಂದಣಿ ಸಂಖ್ಯೆಗಳನ್ನು ಜೋಡಣೆ ಮಾಡುತ್ತಿದ್ದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಮೂರು ವಾರಗಳ ಕಾಲ ಸಿಟಿ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯ ಕಲಂ 20 (ಬಿ) (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

See also  ಮತ್ತೊಂದು ಎರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ..! ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಕೋಲ್ಕತ್ತಾದಲ್ಲಿ ಕೆಳಗಿಳಿಸಿದ ಸಿಬ್ಬಂದಿ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget