ಕರಾವಳಿಪುತ್ತೂರು

ಇನ್ಮುಂದೆ ಖಾಸಗಿ ಬಸ್‌ನಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾಗ್ಯ..? ಕರ್ನಾಟಕ ರಾಜ್ಯ ಬಸ್‌ ಮಾಲೀಕರ ಒಕ್ಕೂಟದ ಅಧ್ಯಕ್ಷ ಹೇಳಿದ್ದೇನು?

253

ನ್ಯೂಸ್ ನಾಟೌಟ್: ಸರಕಾರಿ ಬಸ್‌ನಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭಾಗ್ಯವನ್ನು ನೀಡುವುದಾಗಿ ಸಿದ್ದರಾಮಯ್ಯ ಸರಕಾರ ಘೋಷಿಸಿದೆ. ಈ ವಿಚಾರ ಕಾರ್ಯಗತ ಆಗವುದನ್ನೇ ಎಲ್ಲರು ಎದುರು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ಬಸ್‌ನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯವನ್ನು ನೀಡಬೇಕು ಅನ್ನುವ ಒತ್ತಾಯ ಕೇಳಿ ಬರುತ್ತಿದೆ.

ಸ್ವತಃ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕೂಡ ಇಂಥಹದ್ದೊಂದು ಒತ್ತಾಯವನ್ನು ಮಾಡಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಬಸ್‌ ಮಾಲೀಕರ ಸಂಘಗಳ ಒಕ್ಕೂಟ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಕೂಡ ಇದೇ ಮನವಿಯನ್ನು ಮಾಡಿದ್ದಾರೆ.ಈ ಬಗ್ಗೆ ಮಾತನಾಡಿದ ಕುಯಿಲಾಡಿ ನಾಯಕ್‌, “ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಸರ್ಕಾರಿ ಬಸ್‌ಗಳಿಲ್ಲ, ಅಲ್ಲಿ ಖಾಸಗಿ ಬಸ್‌ಗಳು ಮಾತ್ರ ಇವೆ. ಅಲ್ಲಿನ ಮಹಿಳೆಯರಿಗೆ ಸರ್ಕಾರದ ಉಚಿತ ಯೋಜನೆ ದೊರಕುತ್ತಿಲ್ಲ. ಕೆಎಸ್‌ಆರ್‌ಟಿಯಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಸರ್ಕಾರ ಕೆಎಸ್‌ಆರ್‌ಟಿಸಿ ನಿಗಮಕ್ಕೆ ಇಂತಿಷ್ಟು ಹಣ ನೀಡುತ್ತದೆ. ಅಂಥ ವ್ಯವಸ್ಥೆ ಯನ್ನು ಖಾಸಗಿ ಬಸ್‌ಗೂ ಕಲ್ಪಿಸಿದರೆ ಎಲ್ಲೆಲ್ಲಿ ಸರ್ಕಾರಿ ಬಸ್‌ ಇಲ್ಲ. ಅ ಭಾಗಗಳಲ್ಲಿ ಖಾಸಗಿ ಬಸ್‌ನಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದಂತಾಗುತ್ತದೆ. ಆದರೆ ಸರ್ಕಾರ ಇದರ ವೆಚ್ಚವನ್ನು ಟ್ಯಾಕ್ಸ್‌ ಅಥವಾ ಡೀಸೆಲ್‌ ರಿಯಾಯಿತಿಯಲ್ಲಿ ತುಂಬಿಸಿಕೊಟ್ಟರೆ ನಾವು ಕೂಡ ಉಚಿತ ಸೇವೆ ನೀಡುತ್ತವೆ. ಇದರಿಂದ ರಾಜ್ಯದ ಎಲ್ಲಾಕಡೆ ಮಹಿಳೆಯರಿಗೆ ಸರ್ಕಾರದ ಯೋಜನೆಯ ಪ್ರಯೋಜನ ಲಭಿಸುತ್ತದೆ” ಎಂದು ತಿಳಿಸಿದ್ದಾರೆ.

See also  ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದೋಚಿದ್ದ ಕಳ್ಳರು ಅಂದರ್..!6 ಲಕ್ಷ ರೂ. ಮೌಲ್ಯದ ಚಿನ್ನ ಕದ್ದವರು ಸಿಕ್ಕಿಬಿದ್ದಿದ್ದೇಕೆ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget