ಕರಾವಳಿಕ್ರೈಂವೈರಲ್ ನ್ಯೂಸ್ಸಿನಿಮಾ

ಹೇಮಾ ಕಮಿಟಿಯಂತೆ ಲೈಂಗಿಕ ದೌರ್ಜನ್ಯದ ಬಗ್ಗೆ ಸ್ಯಾಂಡಲ್‌ ವುಡ್‌ ನಲ್ಲೂ ಸಮಿತಿ ಮಾಡಲು ಸಿಎಂಗೆ ಮನವಿ..! ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?

ನ್ಯೂಸ್ ನಾಟೌಟ್: ಮಾಲಿವುಡ್‌ ನಲ್ಲಿ ಹೇಮಾ ಕಮಿಟಿ ರಚಿಸಿ ಅಲ್ಲಿನ ಚಿತ್ರರಂಗದಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯಗಳ ಬಗ್ಗೆ ವರದಿ ಸಲ್ಲಿಸಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲೂ ಅಂತಹ ಸಮಿತಿ ರಚಿಸುವಂತೆ ಒತ್ತಾಯಿಸಲಾಗಿದೆ.

ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಇಂದು (ಸೆ.5) ನಟ ಚೇತನ್ ನೇತೃತ್ವದ ‘ಫೈರ್’ ಸಂಸ್ಥೆ ಮೂಲಕ ಮನವಿ ಪತ್ರ ಸಲ್ಲಿಸಿದ್ದಾರೆ.
ಸ್ಯಾಂಡಲ್‌ವುಡ್ ನಟರಾದ ಸುದೀಪ್, ರಮ್ಯಾ, ಶ್ರದ್ಧಾ ಶ್ರೀನಾಥ್, ನೀತು, ಚೇತನ್ ಅಂಹಿಸಾ ಸೇರಿದಂತೆ 140ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಮತ್ತು ಸಾಹಿತಿಗಳು ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಸಮಿತಿ ರಚನೆಯ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರೋಣ ಎಂದು ಸಿಎಂ ‘ಫೈರ್’ ತಂಡಕ್ಕೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಸೆ.10ರ ಬಳಿಕ ಮತ್ತೊಮ್ಮೆ ಸಭೆ ಮಾಡೋಣ ಎಂದು `ಫೈರ್’ ತಂಡಕ್ಕೆ ತಿಳಿಸಿದ್ದಾರೆ. ಇನ್ನೂ ಸಿಎಂ ಜೊತೆಗಿನ ಸಭೆಯಲ್ಲಿ ನಟ ಚೇತನ್ ಜೊತೆ ನೀತು ಶೆಟ್ಟಿ, ಶೃತಿ ಹರಿಹರನ್, ಹಿರಿಯ ಪತ್ರಕರ್ತೆ ವಿಜಯಮ್ಮ ಭಾಗಿಯಾಗಿದ್ದರು. ಮಲಯಾಳಂ ಸಿನಿಮಾ ರಂಗದಲ್ಲಿ ಜಸ್ಟಿಸ್ ಹೇಮಾ ವರದಿ ಬಿರುಗಾಳಿಯನ್ನೇ ಎಬ್ಬಿಸಿದೆ. ಒಂದು ವಾರದಿಂದ ಮಲಯಾಳಂ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರುಗಳು ದಾಖಲಾಗುತ್ತಿವೆ. ಹಲವರು ದೊಡ್ಡ ದೊಡ್ಡ ನಟರ ತಲೆದಂಡ ಕೂಡ ಆಗಿದೆ.

Click

https://newsnotout.com/2024/09/darshan-thugudeepa-women-protest-infront-of-jail-kannada-news-ballary/
https://newsnotout.com/2024/09/airplane-parts-are-droped-to-house-kannada-news-control-room/
https://newsnotout.com/2024/09/tulunadu-culture-are-misused-in-maharatra-kanada-news-kantara-effect/
https://newsnotout.com/2024/09/ksrtc-and-school-bus-collision-rayachur-40-students-in-kannada-news/
https://newsnotout.com/2024/09/pattanagere-shed-bengaluru-renukaswami-photo-leaked-kannada-news/
https://newsnotout.com/2024/09/konkana-railway-job-vacancy-kannada-news-karnataka-190-jobs/

Related posts

ಕಡಬ: ಸರ್ಕಾರಿ ಶಾಲೆಯಲ್ಲಿ RSS ಗುರುಪೂಜೆ ಆರೋಪ, ಶಾಲೆಯ ಶಿಕ್ಷಕರಿಗೆ ಶೋಕಾಸ್ ನೋಟಿಸ್..!

ಯಾರೂ ಕರೆಂಟ್‌ ಬಿಲ್ ಕಟ್ಟಬೇಡಿ, ತೊಂದರೆಯಾದ್ರೆ ನಾನಿದ್ದೇನೆ: ನಳಿನ್ ಕುಮಾರ್ ಕಟೀಲ್‌

ಅರಂತೋಡು: ಅಡ್ಯಡ್ಕದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ, ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಶಂಕೆ