ಕ್ರೈಂವಿಡಿಯೋವೈರಲ್ ನ್ಯೂಸ್

‘ಸರ್ ಹೆಲ್ಮೆಟ್ ಹಾಕಿಲ್ಲ ಯಾಕೆ?’ ಎಂದು ಕೇಳಿದವಳೇ ಸೀಟ್ ಬೆಲ್ಟ್‌ ಹಾಕಿರ್ಲಿಲ್ಲ..! ಪ್ರಶ್ನೆ ಮಾಡಿ ಪೇಚಿಗೆ ಸಿಲುಕಿದ್ದೇಗೆ ಮಹಿಳೆ? ಇಲ್ಲಿದೆ ವೈರಲ್ ವಿಡಿಯೋ

241

ನ್ಯೂಸ್‌ ನಾಟೌಟ್‌: ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಮಹಿಳೆಯೊಬ್ಬರು ಕಾರು ಚಲಾಯಿಸುತ್ತಾ ಪ್ರಶ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಾರು ಚಲಾಯಿಸುತ್ತಿದ್ದ ಮಹಿಳೆ, ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಪೊಲೀಸನನ್ನು ಕರೆದಿದ್ದಾಳೆ ಆದರೆ ಆಕೆಯೇ ಸೀಟ್ ಬೆಲ್ಟ್ ಧರಿಸಿದ್ದ ಬಗ್ಗೆ ಟ್ರೋಲ್ ಆಗುತ್ತಿದೆ.

ಅವಳು ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಲು ಕಾರಣವನ್ನು ಕೇಳಿದಾಗ ಪೊಲೀಸಪ್ಪ ವಿವರಣೆ ಕೊಡದೆ ಪ್ರಯಾಣಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ ಜನ ಹಿಗ್ಗಾಮಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಷ್ಟಕ್ಕೂ ಈ ವಿಡಿಯೋ ಎಲ್ಲಿ ಸೆರೆಯಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ಹಂಚಿಕೊಂಡಾಗಿನಿಂದ ವೈರಲ್ ಆಗುತ್ತಿದೆ. ಸಂಚಾರಿ ನಿಯಮ ಪಾಲನೆ ಮಾಡದೇ ಇರುವವರು ನಿಯಮದ ಬಗ್ಗೆ ಪ್ರಶ್ನೆ ಮಾಡಿರುವುದು ನಗಪಾಟಲೆಗೆ ಗುರಿಯಾಗಿದೆ.

ಪೊಲೀಸ್ ಅಧಿಕಾರಿ ಮತ್ತು ಆತನಿಗೆ ಪಾಠ ಮಾಡುತ್ತಿರುವ ಮಹಿಳೆ ಇಬ್ಬರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆ ಕಾರು ಚಲಾಯಿಸುತ್ತಿದ್ದು, ಡ್ರೈವಿಂಗ್ ಮಾಡುವಾಗ ಆಕೆ ಸೀಟ್ ಬೆಲ್ಟ್ ಕೂಡ ಧರಿಸಿಲ್ಲ ಎಂದು ಕೆಲವು ಬಳಕೆದಾರರು ಕಿಡಿ ಕಾರಿದ್ದಾರೆ. ಆದ್ದರಿಂದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರು ತಪ್ಪು ಮಾಡಿದ್ದಾರೆ ಎಂದು ಕಾಮೆಂಟ್‌ನಲ್ಲಿ ದೂರಲಾಗಿದೆ. ಈ ವಿಡಿಯೋಗೆ ಮುಂಬೈ ಪೊಲೀಸರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ನಡೆದ ಸ್ಥಳದ ಬಗ್ಗೆ ಅವರು ಮಾಹಿತಿಯನ್ನು ಕೇಳಿದ್ದಾರೆ ಎನ್ನಲಾಗಿದೆ.

See also  ಹೊಸ ಸೇತುವೆಯ ಮೇಲೆ ಲಾಂಗ್ ಹಿಡಿದು ಆಟವಾಡಿದ ಕಿಡಿಗೇಡಿಗಳು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget