Latestಕ್ರೈಂದೇಶ-ವಿದೇಶ

ವಿಮಾನ ದುರಂತದ ಬೆನ್ನಲ್ಲೇ ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ..! ಪೈಲೆಟ್ ಮತ್ತು ಮಗು ಸೇರಿ 7 ಮಂದಿ ಸಾವು.!

946

ನ್ಯೂಸ್ ನಾಟೌಟ್: ಕೇದಾರನಾಥಕ್ಕೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಉತ್ತರಾಖಂಡದ ಗೌರಿಕುಂಡ ಬಳಿ ಪತನಗೊಂಡಿದ್ದು, ಪೈಲೆಟ್, ಮಗು ಸೇರಿ ಹೆಲಿಕಾಪ್ಟರ್‌ನಲ್ಲಿದ್ದ 7 ಮಂದಿ ಸಾವನ್ನಪ್ಪಿದ ಘಟನೆ ಇಂದು(ಜೂ.15) ನಡೆದಿದೆ.

ಹೆಲಿಕಾಪ್ಟರ್ ಪತನಗೊಳ್ಳುವ ಮೊದಲು ತ್ರಿಜುಗಿನಾರಾಯಣ ಮತ್ತು ಗೌರಿಕುಂಡ ನಡುವೆ ಸಂಪರ್ಕ ಕಡಿತಗೊಂಡು ನಾಪತ್ತೆಯಾಗಿತ್ತು ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಡಾ. ವಿ. ಮುರುಗೇಶನ್ ತಿಳಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ ಎನ್ನಲಾಗಿದೆ.

ಹವಾಮಾನ ವೈಪರೀತ್ಯದದಿಂದ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ರುದ್ರಪ್ರಯಾಗ್ ಜಿಲ್ಲೆಯಲ್ಲಿ ಬೆಳಗಿನ ಜಾವ 5:20ರ ಸುಮಾರಿಗೆ ಘಟನೆ ಸಂಭವಿಸಿದ್ದು, ಹೆಲಿಕಾಪ್ಟರ್ ಹೊತ್ತಿ ಉರಿದಿದೆ.

ಘಟನೆ ಸಂಬಂಧ ಕಮೀಷನರ್ ವಿನಯ್ ಶಂಕರ್ ಪಾಂಡೆ ಪ್ರತಿಕ್ರಿಯಿಸಿದ್ದಾರೆ, ‘ಹೆಲಿಕಾಪ್ಟರ್ ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ. ಪೈಲಟ್ ಚೌಹನ್, ಒಂದು ಮಗು ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಕೇದಾರನಾಥ್ ದೇವಸ್ಥಾನ ಸಮಿತಿಯ ಸದಸ್ಯರೊಬ್ಬರು ಕೂಡ ಇದೇ ಹೆಲಿಕಾಪ್ಟರ್‌ನಲ್ಲಿ ಇದ್ದರು. ಈ ಹೆಲಿಕಾಪ್ಟರ್ ಆರ್ಯನ್ ಕಂಪನಿಗೆ ಸೇರಿದೆ” ಎಂದು ತಿಳಿಸಿದ್ದಾರೆ.

ವಿಮಾನ ದುರಂತದಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ..! 12 ಮೃತದೇಹಗಳು ಮಾತ್ರ ಹಸ್ತಾಂತರ..!

See also  ಸುಳ್ಯ: ಪಯಸ್ವಿನಿ ಸೀನಿಯರ್ ಲೀಜನ್ ಮಾಸಿಕ ಸಭೆ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget