ಕೊಡಗು

ಕೊಡಗಿನ ಶಾಲಾ ಮೈದಾನದಲ್ಲಿ ಹಠಾತ್‌ ಇಳಿದ ಹೆಲಿಕಾಪ್ಟರ್..ಓಡಿ ಬಂದ ಜನ..!

ಸೋಮವಾರಪೇಟೆ: ಆಕಾಶದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ವೊಂದು ಹಠಾತ್‌ ಶಾಲಾ ಮೈದಾನದಲ್ಲಿ ಇಳಿದಿದೆ. ಖಾಸಗಿ ಹೆಲಿಕಾಪ್ಟರ್ ಮಡಿಕೇರಿಗೆ ಪ್ರವಾಸಕ್ಕೆ ಬಂದಿದ್ದ ಕುಟುಂಬವೊಂದನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಬಂದಿತ್ತು. ಹೀಗೆ ಬಂದ ಹೆಲಿಕಾಪ್ಟರ್ ಗೆ ಭಾನುವಾರ ಮಂಜು ಮುಸುಕಿದ ವಾತಾವರಣದಿಂದಾಗಿ ಸಂಚರಿಸುವುದಕ್ಕೆ ಕಷ್ಟವಾಗಿದೆ. ತಕ್ಷಣ ಮುಂದೆ ಪ್ರಯಾಣಿಸುವುದು ಅಪಾಯ ಎಂದು ಅರಿತುಕೊಂಡ ಪೈಲಟ್‌ ಮಧ್ಯಾಹ್ನ 1.30ಕ್ಕೆ ಕಾಪ್ಟರ್ ಅನ್ನು ಐಗೂರು ಶಾಲಾ ಮೈದಾನದಲ್ಲಿ ಇಳಿಸಿದ್ದಾರೆ. ತಕ್ಷಣ ಏನಾಯಿತೋ ಎಂದು ಸ್ಥಳೀಯರು ಓಡಿ ಬಂದಿದ್ದಾರೆ. ನಂತರ ಮಡಿಕೇರಿಯಿಂದ ಕಾರಿನಲ್ಲಿ ಬಂದ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಕರೆದುಕೊಂಡು ಅಲ್ಲಿಂದಲೇ ಹೆಲಿಕಾಪ್ಟರ್ ಬೆಂಗಳೂರಿನತ್ತ ಹಾರಿತು.

Related posts

ಮಡಿಕೇರಿ:ವಿವಾಹಿತನಿಗೆ ಅಕ್ರಮ ಸಂಬಂಧದಿಂದ ಮಗು ಜನನ..! ಹುಟ್ಟುತ್ತಲೇ ಕುತ್ತಿಗೆ ಹಿಸುಕಿ ಕೊಂದು ಗದ್ದೆಯಲ್ಲಿ ಹೂತಿಟ್ಟ..!ಏನಿದು ಮನಕಲಕುವ ಘಟನೆ?

ಬ್ರೇಕ್ ಫೇಲಾಗಿ ಗುಡ್ಡಕ್ಕೆ ಅಪ್ಪಳಿಸಿದ ಸುಣ್ಣ ತುಂಬಿದ್ದ ಲಾರಿ,ಚಾಲಕನ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿಗಳ ಜೀವ ಉಳಿಯಿತು

ಮಡಿಕೇರಿ: ರಿವರ್ಸ್‌ ತೆಗೆಯುವಾಗ ಏಕಾಏಕಿ ಹಿಂಬದಿಗೆ ಚಲಿಸಿದ ಕಾರು..! ಮುಂದೇನಾಯ್ತು..? ವಿಡಿಯೋ ವೀಕ್ಷಿಸಿ