ನ್ಯೂಸ್ ನಾಟೌಟ್: ಗಾಳಿ ಮಳೆಯಿಂದಾಗಿ ಸುಳ್ಯ ತಾಲೂಕಿನ ಹಲವೆಡೆ ಹಾನಿಯಾಗಿದೆ. ಮಂಗಳವಾರ (ಏ.29) ಸಾಯಂಕಾಲ ಸುರಿದ ಗಾಳಿ ಮಳೆಗೆ ತೊಡಿಕಾನ ಗ್ರಾಮದ ಬೊಳ್ಳುರು ಪದ್ಮಯ್ಯ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾದ ಬಗ್ಗೆ ವರದಿಯಾಗಿದೆ. ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಮನೆಯ ಹಂಚು ಮುರಿದು ಬಿದ್ದಿದೆ ಎಂದು ತಿಳಿದು ಬಂದಿದೆ.