ಕರಾವಳಿ

ಬಂಟ್ವಾಳ: ಗುಡ್ಡ ಕುಸಿದು ರಸ್ತೆಗೆ ಉರುಳಿದ ಬೃಹತ್‌ ಬಂಡೆ..! ,ಲೊರೊಟ್ಟೊ ಜಂಕ್ಷನ್‌ನಿಂದ ಮಹಲ್ ತೋಟ ಸಂಪರ್ಕ ಕಡಿತ

ನ್ಯೂಸ್‌ ನಾಟೌಟ್‌: ಬಂಟ್ವಾಳದ ಲೊರೊಟ್ಟೊ ಎಂಬಲ್ಲಿ ಗುಡ್ಡ ಕುಸಿದು ಕಲ್ಲು ಬಂಡೆ ಸಹಿತ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ರಸ್ತೆ ಸಂಪೂರ್ಣ ಬಂದ್ ಆಗಿರುವ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ಬಂಟ್ವಾಳ ಸಮೀಪದ ಅಮ್ಟಾಡಿ ಗ್ರಾ.ಪಂ‌.ವ್ಯಾಪ್ತಿಯ ಲೊರೆಟ್ಟೊ ಮಹಲ್ ತೋಟ ಎಂಬಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಲೊರೊಟ್ಟೊ ಜಂಕ್ಷನ್ ನಿಂದ ಮಹಲ್ ತೋಟ ಎಂಬ ಹಳ್ಳಿಯೊಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆ ಬದಿಯಲ್ಲಿರುವ ಗುಡ್ಡ ಕುಸಿದು ರಸ್ತೆಗೆ ಬಿದ್ದಿದೆ. ಮಣ್ಣಿನ ಜೊತೆ ಬೃಹತ್ ಗಾತ್ರದ ಅಪಾಯಕಾರಿ ಕಲ್ಲುಬಂಡೆಗಳು ಉರುಳಿ ಬಿದ್ದು ರಸ್ತೆಗೆ ಹಾನಿಯಾಗಿದ್ದು, ಸಂಪರ್ಕ ಕಡಿತಗೊಂಡಿದೆ.

ಕಳೆದ ಕೆಲವು ದಿನಗಳಿಂದ ಸುರಿಯುವ ಗಾಳಿ ಮಳೆಗೆ ನಿತ್ಯ ಪ್ರಾಕೃತಿಕ ವಿಕೋಪಗಳು ಉಂಟಾಗುತ್ತಿದ್ದು, ತಾಲೂಕಿನ ಅನೇಕ ಕಡೆಗಳಲ್ಲಿ ಮನೆ, ಮರ, ಗುಡ್ಡ ಕುಸಿದು ಅಪಾರ ಹಾನಿಯಾಗಿದೆ.

Related posts

Madikeri:ರಸ್ತೆ ಬದಿಯಲ್ಲಿದ್ದ ಕಾರಿಗೆ ಡಿಕ್ಕಿಯಾದ ಕಾರು,ಕೊಡಗಿನ ಯುವಕ ದುರಂತ ಅಂತ್ಯ

ಸೈಕ್ಲೋನ್ ಎಫೆಕ್ಟ್,ಇನ್ನೂ ಎರಡು ದಿನ ಮಳೆ ಸುರಿಯುವ ಸಾಧ್ಯತೆ

ಸುಬ್ರಹ್ಮಣ್ಯ: ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ವೇಳೆ ಡಿಕ್ಕಿ ಹೊಡೆದ ಬೈಕ್..!ಕರ್ತವ್ಯ ನಿರತ ಅರಣ್ಯ ಪಾಲಕನಿಗೆ ಗಾಯ,ಆಸ್ಪತ್ರೆಗೆ ದಾಖಲು