ಕ್ರೈಂಮಹಿಳೆ-ಆರೋಗ್ಯವೈರಲ್ ನ್ಯೂಸ್

ಹೃದಯಾಘಾತಕ್ಕೆ 7ನೇ ತರಗತಿ ವಿದ್ಯಾರ್ಥಿನಿ ಬಲಿಯಾದದ್ದೆಲ್ಲಿ..? ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದೇಕೆ ಗ್ರಾಮಸ್ಥರು?

ನ್ಯೂಸ್ ನಾಟೌಟ್ : 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದ ಘಟನೆ ಚಿಕ್ಕಮಗಳೂರಿನಲ್ಲಿ ಇಂದು(ಡಿ.20) ನಡೆದಿದೆ.
13 ವರ್ಷದ ಬಾಲಯನ್ನು ಸೃಷ್ಟಿ ಎಂದು ಗುರುತಿಸಲಾಗಿದೆ. ಮೂಡಿಗೆರೆ ತಾಲೂಕಿನ ಕೆಸವಳಲು ಜೋಗಣ್ಣನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ದಾರದಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಶಾಲೆಗೆ ತೆರಳುತ್ತಿದ್ದಾಗ ಹಠಾತ್‌ ಆಗಿ ಕುಸಿದು ಬಿದ್ದಿದ್ದಾಳೆ. ಹೀಗಾಗಿ ಸೃಷ್ಟಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಕೊನೆಯುಸಿರೆಳೆದಿದ್ದಾರೆ.

ಬಳಿಕ ಪರೀಕ್ಷೆ ನಡೆಸಿದ ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆ ವೈದ್ಯರು ದೃಢಿಕರಿಸಿದ್ದಾರೆ. ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳು ಸಹ ಇಲ್ಲ. ಈ ಕಾರಣದಿಂದ ಬಾಲಕಿಯೊಬ್ಬಳು ಕೊನೆಯುಸಿರೆಳೆದಿದ್ದಾಳೆ ಎಂದು ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ಗ್ರಾಮದಲ್ಲೇ ಆಸ್ಪತ್ರೆಯಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮೂಡಿಗೆರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸೃಷ್ಟಿ ದುರಂತ ಅಂತ್ಯ ಕಂಡಿದ್ದಾಳೆ ಎಮದು ಆರೋಪಿಸಿದ್ದಾರೆ.

Related posts

ಸುಳ್ಯ: ನಿವೃತ್ತ ಫಾರೆಸ್ಟ್ ಆಫೀಸರ್ ಪದ್ಮಯ್ಯ ಗೌಡ ನಿಧನ, ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ

ಕಾಸರಗೋಡು: ಸಂಜೆ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ದಿಢೀರ್ ನಾಪತ್ತೆ..! ಕೆರೆಯಲ್ಲಿ 3 ವರ್ಷದ ಮಗುವಿನ ಶವ ಪತ್ತೆ..!

8 ಶತಮಾನಗಳ ನಂತರ ಐಸ್ಲ್ಯಾಂಡ್‌ ನಲ್ಲಿ ಉಕ್ಕಿದ ಜ್ವಾಲಾಮುಖಿ..! ವಿಮಾನದ ಕಿಟಕಿಯಿಂದ ಅದ್ಭುತ ದೃಶ್ಯ ಸೆರೆ, ಇಲ್ಲಿದೆ ವೈರಲ್ ವಿಡಿಯೋ