ಜೀವನ ಶೈಲಿ/ಆರೋಗ್ಯದೇಶ-ವಿದೇಶಮಹಿಳೆ-ಆರೋಗ್ಯವಿಡಿಯೋವೈರಲ್ ನ್ಯೂಸ್

ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾಗ ಸಂಸತ್‌ ನಲ್ಲಿ ಕುಸಿದು ಬಿದ್ದ ಕಾಂಗ್ರೆಸ್ ಸಂಸದೆ..! ಇಲ್ಲಿದೆ ವಿಡಿಯೋ

229

ನ್ಯೂಸ್ ನಾಟೌಟ್: ನೀಟ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಾಜ್ಯ ಸಭಾ ಸಂಸದೆ ಫುಲೊ ದೇವಿ ನೇತಮ್‌ ಸಂಸತ್‌ ನೊಳಗೆ ಕುಸಿದು ಬಿದ್ದ ಘಟನೆ ಇಂದು(ಜೂ.28) ನಡೆದಿದೆ.

ಪ್ರತಿಭಟನೆ ವೇಳೆ ತಲೆತಿರುಗಿದಂತಾಗಿ ಕುಸಿದು ಬಿದ್ದ ಅವರನ್ನು ಕೂಡಲೇ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ.

ನೀಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದವು ಆದರೆ ಇತ್ತ ಆಡಳಿತ ಪಕ್ಷವೂ ಮೊದಲಿಗೆ ರಾಷ್ಟ್ರಪತಿಗಳ ಭಾಷಣ ಆ ಮೇಲೆ ವಂದನಾ ನಿರ್ಣಯ ಸಲ್ಲಿಸಲು ಮುಂದಾಗಿದ್ದರಿಂದ ಸಿಟ್ಟಿಗೆದ್ದ ಪ್ರತಿಪಕ್ಷಗಳು ಗಲಾಟೆ ಮುಂದುವರೆಸಿದವು. ಈ ವೇಳೆ ಈ ಘಟನೆ ನಡೆದಿದೆ. ಹೀಗಾಗಿ ಸಂಸತ್ ಕಲಾಪವನ್ನು ಸೋಮವಾರ ಜುಲೈ 1ರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯ್ತು.

Click 👇

https://newsnotout.com/2024/06/snake-in-inner-wear-viral-video-kannada-news-thailand-issue
https://newsnotout.com/2024/06/actor-darshan-in-jail-accused-number-is-in-trendingkannada-news
https://newsnotout.com/2024/06/drupadi-murmu-kannada-news-healthcare-from-govt-announced-by-president
https://newsnotout.com/2024/06/sea-flood-issue-ullala-house-collapsed-kannada-news-sea-bank-slide
See also  ಪುತ್ತೂರು: ಸ್ಪೀಕರ್ ಯು.ಟಿ ಖಾದರ್ ನಾಗಾರಾಧನೆಗೆ ಭೂಮಿ ಬಿಟ್ಟುಕೊಟ್ಟದ್ದೇಕೆ? ಏನಿದು ತುಳುನಾಡ ಕೋಮು ಸೌಹಾರ್ದತೆಯ ಕಥೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget