ಕರಾವಳಿಕ್ರೈಂವೈರಲ್ ನ್ಯೂಸ್

ಆರೋಗ್ಯ ಸ್ಥಿರ, ಸಿಟಿ ಸ್ಕ್ಯಾನ್‌ ಕೂಡ ನಾರ್ಮಲ್‌, ಆದ್ರೂ ಡಿಸ್ಚಾರ್ಜ್‌ ಆಗೊಲ್ಲ ಅಂತಾಳೆ ಚೈತ್ರಾ ಕುಂದಾಪುರ! ಚೈತ್ರಾ ಕುಂದಾಪುರ ಹೈಡ್ರಾಮಾಕ್ಕೆ ಕಾರಣವೇನು?

273

ನ್ಯೂಸ್‌ ನಾಟೌಟ್‌: ಉಡುಪಿಯ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ ಮಾಡಿದ್ದ ಎ1 ಆರೋಪಿ ಚೈತ್ರಾ ಕುಂದಾಪುರ ಪೊಲೀಸ್‌ ವಿಚಾರಣೆಗೆ ಒಪ್ಪಿಸಲಾಗಿದೆ.

ಆದರೆ ಆಕೆ ತಲೆಸುತ್ತು ಬಂದಿದೆ, ಪಿಡ್ಸ್‌ ಇದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ವೈದ್ಯರು ತಪಾಸಣೆ ಮಾಡಿದಾಗ ಆರೋಗ್ಯ ಸ್ಥಿರವಾಗಿದ್ದು, ಸಿಟಿ ಸ್ಕ್ಯಾನ್‌ ಕೂಡ ನಾರ್ಮಲ್‌ ಬಂದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುವಂತೆ ವೈದ್ಯರು ಹೇಳಿದರೂ ಇದಕ್ಕೊಪ್ಪದೇ ಆಸ್ಪತ್ರೆಯಿಂದ ಹೋಗದೇ ಡ್ರಾಮಾ ಮಾಡುತ್ತಿದ್ದಾಳೆ ಎನ್ನಲಾಗಿದೆ.

ಗೋವಿಂದ ಬಾಬು ಪೂಜಾರಿಗೆ ವಂಚನೆ ಕೇಸ್​ನಲ್ಲಿ ಬಂಧನವಾಗಿರುವ ಆರೋಪಿ ಚೈತ್ರಾ ಕುಂದಾಪುರ (Chaitra Kundapura) ತಾಯಿ ಮಗಳ ಬಂಧನದ ಕುರಿತು ಮಾತನಾಡಿದ್ದು, ಬುಧವಾರ ಬೆಳಗ್ಗೆ ಮಗಳ ಬಂಧನದ ವಿಷಯ ಗೊತ್ತಾಯ್ತು. ಹಿರಿಯ ಪುತ್ರಿ ಕರೆ ಮಾಡಿ ಚೈತ್ರಾ ಬಂಧನವಾಗಿರುವ ವಿಷಯವನ್ನು ತಿಳಿಸಿದಳು ಎಂದಿದ್ದಾರೆ.

ಮಗಳು ಒಳ್ಳೆಯ ರೀತಿಯಲ್ಲಿದ್ದು, ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತಾಳೆ. ನಾವು ಕಾರ್ಯಕ್ರಮದ ಬಗ್ಗೆ ಏನು ಕೇಳುತ್ತಿರಲಿಲ್ಲ. ಮಗಳ ಬಂಧನ ಆಗಿರೋದಕ್ಕೆ ಬೇಜಾರು ಆಗುತ್ತೆ. ಯಾರ್ ಯಾರಿಗೋಸ್ಕರ ಇದು ಆಗಿದೆ ಗೊತ್ತಿಲ್ಲ. ನನ್ನ ಮಗಳು ಈ ರೀತಿ ಮೋಸ ಮಾಡುತ್ತಾಳೆ ಎಂದು ನನಗೆ ಅನ್ನಿಸಲ್ಲ ಎಂದಿದ್ದಾರೆ.

ಕೆಲವು ಮೂಲಗಳ ಮಾಹಿತಿ ಪ್ರಕಾರ, ಆಕೆ ಸೋಪು ಬೇಕೆಂದು ಠಾಣಾ ಅಧಿಕಾರಿಗಳಲ್ಲಿ ಕೇಳಿ ಪಡೆದಿದ್ದಳು ಬಾಯಿಯಿಂದ ನೊರೆ ಬಂದಿರುವುದು ಸೋಪ್ ನೊರೆ ಎನ್ನಲಾಗಿದೆ. ವೈದ್ಯರ ತಪಾಸಣೆಯಲ್ಲಿ ಯಾವುದೇ ಪಿಡ್ಸ್ ಅಥವಾ ಬೇರೆ ಕಾಯಿಲೆಗಳಿರುವುದು ದೃಢಪಟ್ಟಿಲ್ಲ, ಆಕೆ ಆರೋಗ್ಯವಾಗಿದ್ದಾರೆ ಎಂಬ ವರದಿ ಬಂದಿದೆ, ಆದರೂ ಡಿಸ್ಚಾರ್ಜ್ ಗೆ ಒಪ್ಪುತ್ತಿಲ್ಲ ಎನ್ನಲಾಗಿದೆ.

See also  ಬಸ್ಸನ್ನು ಓವರ್ ಟೇಕ್ ಮಾಡುವಾಗ ಸ್ಕಿಡ್‌ ಆದ ಬೈಕ್‌ ; ಓರ್ವ ಮೃತ್ಯು, ಮತ್ತೋರ್ವನಿಗೆ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget