ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಹೆಡ್ ಫೋನ್ ಹಾಕಿ ರೈಲು ಹಳಿ ಮೇಲೆ ಕುಳಿತಿದ್ದ ವಿದ್ಯಾರ್ಥಿಗೆ ರೈಲು ಡಿಕ್ಕಿ..! ಕುಟುಂಬದ ಏಕೈಕ ಪುತ್ರನ ಸಾವಿನಿಂದ ಕಂಗಾಲಾದ ಕುಟುಂಬ..!

ನ್ಯೂಸ್ ನಾಟೌಟ್: ಹೆಡ್ ಫೋನ್ ಹಾಕಿ ರೈಲು ಹಳಿಯ ಮೇಲೆ ಕುಳಿತ್ತಿದ್ದ ವಿದ್ಯಾರ್ಥಿಗೆ ರೈಲು ಡಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬುಧವಾರ (ಅ.30) ನಡೆದಿದೆ.

ಘಟನೆಯಲ್ಲಿ ಬಿಬಿಎ ವಿದ್ಯಾರ್ಥಿ ಮನರಾಜ್ ತೋಮರ್ ಮೃತ ಯುವಕ ಎಂದು ಗುರುತಿಸಲಾಗಿದೆ.
ಮನರಾಜ್ ಹಾಗೂ ಆತನ ಸ್ನೇಹಿತ ಇಬ್ಬರೂ ರೈಲು ಹಳಿಯ ಮೇಲೆ ಕುಳಿತು ಹೆಡ್ ಫೋನ್ ಹಾಕಿ ಮೊಬೈಲ್ ನಲ್ಲಿ ಏರು ಧ್ವನಿಯಲ್ಲಿ ಸಂಗೀತ ಕೇಳುತ್ತಿದ್ದ ಕಾರಣ ಯುವಕರಿಗೆ ತಿಳಿಯಲಿಲ್ಲ. ಅದೇ ಹಳಿಯಲ್ಲಿ ಬಂದ ರೈಲು ಮನರಾಜ್ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಮನರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಕುಟುಂಬದ ಏಕೈಕ ಪುತ್ರನಾಗಿದ್ದ ಮನರಾಜ್ ಸಾವಿನಿಂದ ಕುಟುಂಬದವರಿಗೆ ಆಘಾತವಾಗಿದೆ.

Click

https://newsnotout.com/2024/10/jai-hanuman-cinema-kannada-news-rishab-shetty-viral-news-d/
https://newsnotout.com/2024/10/kumbhamela-kannada-news-17-year-old-boy-nomore-kannada-news/
https://newsnotout.com/2024/10/kumbhamela-kannada-news-prayagraj-viral-news-d/
https://newsnotout.com/2024/10/goa-kannada-news-bengaluru-kannada-news-wine/
https://newsnotout.com/2024/10/darshan-kannada-news-bengaluru-viral-news-bail-d/
https://newsnotout.com/2024/10/china-and-india-military-withdawn-from-conflicted-boarder/
https://newsnotout.com/2024/10/waqf-shashikala-jolle-kannada-news-bjp-family-k-d/

Related posts

ಪೊಲೀಸ್‌ ಇಲಾಖೆಯ 2,400 KSRP ಕಾನ್ ಸ್ಟೇಬಲ್ ಗಳ ನೇಮಕಕ್ಕೆ ಸರ್ಕಾರ ಆದೇಶ, ತುರ್ತು ಸಂದರ್ಭಗಳನ್ನು ನಿಭಾಯಿಸಲು ಬೆಟಾಲಿಯನ್ ಗಳ ತಯಾರಿಗೆ ಸಿದ್ಧತೆ

Ram Mandir: ಇನ್ನು ಮುಂದೆ ಅಯೋಧ್ಯೆಯ ರಾಮ ಮಂದಿರದ ಆವರಣದಲ್ಲಿ ಮೊಬೈಲ್​ ಬಳಕೆ ನಿಷೇಧ..! ವಿಐಪಿ ಮತ್ತು ವಿವಿಐಪಿಗಳು ಕೂಡ ಮೊಬೈಲ್ ಫೋನ್ ಕೊಂಡೊಯ್ಯುವಂತಿಲ್ಲ..!

ಕಾವು: ಬಿಜೆಪಿಗೆ ಗುಡ್ ಬೈ ಹೇಳಿ ‘ಕೈ’ ಹಿಡಿದ ಬಿಜೆಪಿ ಕಾರ್ಯಕರ್ತರು, ಪದ್ಮರಾಜ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ