ಕ್ರೈಂರಾಜ್ಯವೈರಲ್ ನ್ಯೂಸ್

13 ವರ್ಷದ ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕನಿಂದಲೇ ಅತ್ಯಾಚಾರ..! ಬಾಲಕಿ 3 ತಿಂಗಳ ಗರ್ಭಿಣಿ..!

ನ್ಯೂಸ್ ನಾಟೌಟ್: ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಮೇಲೆ ಮುಖ್ಯಶಿಕ್ಷಕ ಹಲವು ಬಾರಿ ಅತ್ಯಾಚಾರ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತನ್ನದೇ ಶಾಲೆಯ 13 ವರ್ಷದ ವಿದ್ಯಾರ್ಥಿನಿಯನ್ನು ಶಿಕ್ಷಕ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.

ಮುಖ್ಯಶಿಕ್ಷಕ ಆಕೆಯನ್ನು ಕಳೆದ ಒಂದು ವರ್ಷದಿಂದ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯ ಶಿಕ್ಷಕ ವೆಂಕಟೇಶ್ ಎಂಬಾತನನ್ನು ಗ್ರಾಮಾಂತರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಪ್ತ ಸಮಾಲೋಚನೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಅಪ್ರಾಪ್ತ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ 3 ತಿಂಗಳ ಗರ್ಭಿಣಿ ಎಂದು ತಿಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

Click 👇

https://newsnotout.com/2024/05/kiccha-in-tulunadu-and-speech-kannada-news
https://newsnotout.com/2024/05/mangaluru-namaz-on-public-road-issue
https://newsnotout.com/2024/05/kashmir-and-flood-in-river-and-baby-issue

Related posts

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು

‘ವೆಡ್ಡಿಂಗ್ ಆ್ಯನಿವರ್ಸರಿ’ ಆಚರಿಸಿಕೊಂಡ ಬಳಿಕ ದಂಪತಿ ನೇಣಿಗೆ ಶರಣು..! ಮದುವೆಗೆ ಧರಿಸಿದ್ದ ಬಟ್ಟೆಗಳನ್ನು ತೊಟ್ಟು, ಅಲಂಕರಿಸಿಕೊಂಡು ಆತ್ಮಹತ್ಯೆ

ದೇವಸ್ಥಾನದ ಆವರಣದಲ್ಲೇ ನಟಿಗೆ ಕಿಸ್ ಕೊಟ್ಟ ನಿರ್ದೇಶಕ, ಹಿಗ್ಗಾಮುಗ್ಗ ಜಾಡಿಸಿದ ನೆಟ್ಟಿಗರು!