ಕರಾವಳಿ

ಮನೆಯ ಹಂಚು ತೆಗೆದು ಬೆಡ್‌ರೂಂ ಗೆ ನುಗ್ಗಿ ಲೈಂಗಿಕ ಕಿರುಕುಳ..!,ಮಹಿಳೆ ಕಿರುಚುವ ವೇಳೆ ಕಾಮುಕ ಸ್ಥಳದಿಂದ ಪರಾರಿ..!ಆ ಒಂದು ವಸ್ತುವಿನಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದರು..ಆ ವಸ್ತು ಯಾವುದು?

115

ನ್ಯೂಸ್ ನಾಟೌಟ್ : ಮನೆಯ ಮೇಲ್ಛಾವಣಿಗೆ ಹತ್ತಿ ಹಂಚು ತೆಗೆದು ಬೆಡ್ ರೂಂ ಗೆ ನುಗ್ಗಿ ಮಂಚದ ಕೆಳಗೆ ಮಲಗಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.ಮಂಗಳೂರು ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು,ಆರೋಫಿ ಹರೇಕಳ ನಿವಾಸಿ ನೌಫಾಲ್ (38) ನನ್ನು ಬಂಧಿಸಲಾಗಿದೆ.

ರಾತ್ರಿ ವೇಳೆ ಮಹಿಳೋರ್ವರು ಬೆಡ್‌ರೂಂ ನಲ್ಲಿ ಮಲಗುತ್ತಿದ್ದ ವೇಳೆ ಈತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.ರಾತ್ರಿ ಹೊತ್ತು ಸಂಚು ಹೂಡಿದ್ದ ಆರೋಪಿ ಹೆಂಚು ತೆಗೆದು ಮಂಚದ ಅಡಿಯಲ್ಲಿ ಮಲಗಿದ್ದ ಎನ್ನಲಾಗಿದೆ.ರಾತ್ರಿ 10 ರ ಸುಮಾರಿಗೆ ತನ್ನ ಮಕ್ಕಳಿಬ್ಬರ ಜೊತೆ ಮಹಿಳೆ ಮಲಗಿದ್ದಾಳೆ.ಇದೇ ಸರಿಯಾದ ಸಮಯಕ್ಕೆ ಬಂದಿದ್ದ ಆರೋಪಿ ರಾತ್ರಿ 12.10 ಕ್ಕೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಮಹಿಳೆ ಕಿರುಚುತ್ತಾ ಲೈಟ್ ಹಾಕಿ ನೋಡುತ್ತಿದ್ದ ವೇಳೆ ನೌಫಾಲ್ ಮೊಬೈಲ್ ಬಿಟ್ಟು ಪರಾರಿಯಾಗಿದ್ದಾನೆ.ಮೊಬೈಲ್ ಆಧಾರದ ಮೇಲೆ ಬಂದಿದ್ದು ನೌಫಾಲ್ ಅಂತ ಪತ್ತೆ ಮಾಡಲಾಗಿದೆ.ಕೋಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

https://www.youtube.com/watch?v=mtKTEHG9O4I

See also  ಸುಳ್ಯದಲ್ಲಿ ಬಿಜೆಪಿಯಿಂದ ಅಂಗಾರ ಅವರಿಗೆ ಏಳನೇ ಬಾರಿ ಸ್ಪರ್ಧೆಗೆ ಪಕ್ಷದಲ್ಲೇ ಅಪಸ್ವರ
  Ad Widget   Ad Widget   Ad Widget   Ad Widget   Ad Widget   Ad Widget