ಕ್ರೈಂರಾಜಕೀಯವೈರಲ್ ನ್ಯೂಸ್

HDK: ನನ್ನ ಸುತ್ತ ಇರುವ 45 ಜನರ ಮೊಬೈಲ್‌ ಫೋನ್‌ಗಳನ್ನೂ ಕದ್ದಾಲಿಸಲಾಗುತ್ತಿದೆ ಎಂದ ಹೆಚ್.ಡಿ.ಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ

225

ನ್ಯೂಸ್ ನಾಟೌಟ್: ‘ನನ್ನ ಮತ್ತು ನಮ್ಮ ಕುಟುಂಬದವರ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ. ಕುಟುಂಬದ ಎಲ್ಲ ಸದಸ್ಯರ ಮೊಬೈಲ್‌ ಫೋನ್‌ ಗಳನ್ನು ಕದ್ದಾಲಿಸಲಾಗುತ್ತಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ(ಮೇ.20) ಮಾತನಾಡಿದ ಹೆಚ್.ಡಿ.ಕೆ, ‘ನನ್ನ ಸುತ್ತ ಇರುವ 45 ಜನರ ಮೊಬೈಲ್‌ ಫೋನ್‌ಗಳನ್ನೂ ಕದ್ದಾಲಿಸಲಾಗುತ್ತಿದೆ’ ಎಂದಿದ್ದಾರೆ.

‘ಎಲ್‌.ಆರ್‌. ಶಿವರಾಮೇಗೌಡ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿಕೊಂಡು ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಿರುವ ಆಡಿಯೊ ತುಣುಕು ಬಹಿರಂಗವಾಗಿದೆ. ಶಿವಕುಮಾರ್‌ ಪಾತ್ರ ಇರುವುದು ಸ್ಪಷ್ಟವಾಗಿ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಆ ಆಡಿಯೊ ಮತ್ತು ವಿಡಿಯೊ ಅಸಲಿಯತ್ತು ಹೊರ ಬರಬೇಕು’ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

‘ಡಿ.ಕೆ. ಶಿವಕುಮಾರ್ ಈ ರೀತಿಯ ರಾಜಕೀಯ ಮಾಡಬೇಕಾ? ನಾನು ಯಾವುದೇ ರಕ್ಷಣಾತ್ಮಕ ಆಟ ಆಡುತ್ತಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಮಾತಿಗೆ ಬದ್ಧನಾಗಿದ್ದೇನೆ. ಸಂತ್ರಸ್ತ ಮಹಿಳೆಯರು ಮಾನಸಿಕವಾಗಿ ಕುಗ್ಗಬಾರದು. ಪ್ರಜ್ವಲ್‌ನಿಂದ ತಪ್ಪಾಗಿದ್ದರೆ ದಯವಿಟ್ಟು ಅಂಜಬೇಡಿ. ನಾವು ಮನುಷತ್ವ ಇಲ್ಲದ ಜನ ಅಲ್ಲ’ ಎಂದಿದ್ದಾರೆ.

Click 👇

https://newsnotout.com/2024/05/bengaluru-and-jolly-bike-ride-and-viral-video
https://newsnotout.com/2024/05/narendra-modi-and-teacher-rajak
https://newsnotout.com/2024/05/30-year-old-jyoti-amge-viral-video
See also  ತಡವಾಗಿ ಬಂದನೆಂದು ನಿಂದಿಸಿದರಾ ಶಿಕ್ಷಕರು..? ಕಾಲೇಜಿನ ಐದನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget