ನ್ಯೂಸ್ ನಾಟೌಟ್: ಖ್ಯಾತ ಕುಬ್ಜ ಹಾಸ್ಯನಟ ದರ್ಶನ್ ಗೆ ಮನರಂಜನಾ ಉದ್ಯಮದಲ್ಲಿ ದೊಡ್ಡ ಆಘಾತವನ್ನುಂಟು ಮಾಡಿದ ಪ್ರಕರಣವೊಂದರಲ್ಲಿ,ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಹಿಸಾರ್ ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುನಿಲ್ ಜಿಂದಾಲ್ ಅವರ ನ್ಯಾಯಾಲಯವು ಈ ತೀರ್ಪನ್ನು ಸೋಮವಾರ ಪ್ರಕಟಿಸಿದೆ.ಹರಿಯಾಣ ಮೂಲದ ದರ್ಶನ್ ಮಾರ್ಚ್ 11ರಂದು ತಪ್ಪಿತಸ್ಥ ಎಂದು ಸಾಬೀತಾಗಿದ್ದು, ಅಂದಿನಿಂದ ಪೊಲೀಸ್ ಬಂಧನದಲ್ಲಿದ್ದಾರೆ.ಪೋಕ್ಸೊ ಕಾಯ್ದೆಯಡಿ 20 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ, ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 363, 343 ಮತ್ತು 506ರ ಅಡಿಯಲ್ಲಿ ಕ್ರಮವಾಗಿ 3 ವರ್ಷ, 1 ವರ್ಷ ಮತ್ತು 2 ವರ್ಷಗಳ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
ಈ ಪ್ರಕರಣ ಸೆಪ್ಟೆಂಬರ್ 2020ರಲ್ಲಿ ಬೆಳಕಿಗೆ ಬಂತು. ಅಗ್ರೋಹಾ ಪ್ರದೇಶದ ಹಳ್ಳಿಯೊಂದರ ಅಪ್ರಾಪ್ತ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹಾಸ್ಯನಟ ದರ್ಶನ್ ಅವರನ್ನು ತನಿಖೆ ಮಾಡಲಾಗಿತ್ತು.