Latestಕೊಡಗುಸಿನಿಮಾ

ಕೊಡಗು:ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ ಪುತ್ರಿಯ ನಾಮಕರಣ, ಮುದ್ದಾದ ಮಗು ಕೊಡವ ಶೈಲಿಯ ಉಡುಗೆಗಳಲ್ಲಿ ಮಿಂಚಿಂಗ್! ಹೆಸರೇನು?

829

ನ್ಯೂಸ್‌ ನಾಟೌಟ್: ಸರಳ ನಡೆ ನುಡಿಯಿಂದ ಖ್ಯಾತಿ ಗಳಿಸಿದ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ. ಮಾತ್ರವಲ್ಲ ಈ ಕ್ಯೂಟ್ ಫ್ಯಾಮಿಲಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅವರ ಮುದ್ದಾದ ಮಗುವಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ? ಇಲ್ಲಿದೆ ಡಿಟೇಲ್ಸ್..

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಪೋಷಕರಾದ ಈ ಜೋಡಿಗೆ ಮುದ್ದಾದ ಹೆಣ್ಣು ಮಗುವಿನ ಜನನವಾಗಿದೆ. ಇದೀಗ ಈ ಜೋಡಿ ತಮ್ಮ ಮಗುವಿನ ನಾಮಕರಣ ಮಾಡಿದ್ದು, ಮಗುವಿಗೆ ಶ್ರೀದೇವಿ ಪೊನ್ನಕ್ಕ ಎಂದು ಹೆಸರಿಟ್ಟಿದ್ದಾರೆ. ಮಗುವಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇಬ್ಬರು ಸೆಲೆಬ್ರಿಟಿಗಳಾದ್ರೂ ಕೂಡ , ಆಧುನಿಕ ಹೆಸರನ್ನಿಡುವ ಟ್ರೆಂಡ್ ಇರುವ ಇಂತಹ ಸಮಯದಲ್ಲಿಯೂ ತಮ್ಮ ಪುತ್ರಿಗೆ ಶ್ರೀದೇವಿ ಪೊನ್ನಕ್ಕ ಎಂದು ದೇವರ ಹೆಸರನ್ನು ಈ ಜೋಡಿ ಇರಿಸಿದ್ದು, ವಿಶೇಷವೆನಿಸಿದೆ. ಅಂದಹಾಗೆ ಪೊನ್ನಕ್ಕ ಎಂಬುದು ಸರ್ ನೇಮ್ ಅಲ್ಲ, ಬದಲಿಗೆ ಅದೂ ಸಹ ಹೆಸರೇ. ಮಗುವಿನ ಪೂರ್ಣ ಹೆಸರು ಶ್ರೀದೇವಿ ಪೊನ್ನಕ್ಕ ಎಂದು. ಇನ್ನು ಮಗು ಕೂಡ ಕೊಡವ ಶೈಲಿಯ ಉಡುಗೆಗಳಲ್ಲಿದ್ದಿದ್ದು ವಿಶೇಷವೆನಿಸಿದೆ.

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರುಗಳು 2023ರ ಆಗಸ್ಟ್ ತಿಂಗಳಲ್ಲಿ ಕೊಡವ ಸಂಪ್ರದಾಯದಂತೆ ಕೊಡಗಿನಲ್ಲಿಯೇ ವಿವಾಹವಾದರು. 2024 ರಲ್ಲಿ ನಟಿ ಹರ್ಷಿಕಾ ಪೂಣಚ್ಚ ತಾವು ತಾಯಿಯಾಗುತ್ತಿರುವ ವಿಷಯ ಘೋಷಿಸಿದರು. ಬಳಿಕ ಗರ್ಭಿಣಿ ಆಗಿದ್ದಾಗ ಕೊಡವ ಶೈಲಿಯಲ್ಲಿ ಫೋಟೊಶೂಟ್ ಸಹ ಮಾಡಿಸಿ ಗಮನ ಸೆಳೆದರು. ನಟಿಯ ಸೀಮಂತ ಕಾರ್ಯಕ್ರಮವನ್ನು ಸಹ ಅದ್ಧೂರಿಯಾಗಿ ಮಾಡಲಾಗಿತ್ತು. ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ಹರ್ಷಿಕಾ, ಭುವನ್ ಅವರ ಗೆಳೆಯರು ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಬಳಿಕ 2024ರ ಸೆಪ್ಟೆಂಬರ್ ತಿಂಗಳಲ್ಲಿ ಈ ಜೋಡಿಗೆ ಮುದ್ದಾದ ಹೆಣ್ಣು ಮಗು ಜನಿಸಿದ್ದು,ಸಾಂಪ್ರದಾಯಿಕ ಶೈಲಿಯಲ್ಲಿಯೇ ನಾಮಕರಣ ಕಾರ್ಯಕ್ರಮ ಮಾಡಿದ್ದು ಮಗುವಿಗೆ ಸಹ ಸಾಂಪ್ರದಾಯಿಕ ಹೆಸರನ್ನೇ ಇರಿಸಿದ್ದಾರೆ.

See also  ನಿಗೂಢವಾಗಿ ನಾಪತ್ತೆಯಾಗಿದ್ದ ಗೋಳಿತೊಟ್ಟುವಿನ ಆಟೋ ರಿಕ್ಷಾ ಚಾಲಕ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ..! ಯಾವುದೇ ದುಶ್ಚಟಗಳಿಲ್ಲದ 19 ವರ್ಷದ ಯುವಕನಿಗೆ ಆಗಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget