ಕ್ರೈಂವೈರಲ್ ನ್ಯೂಸ್ಸಿನಿಮಾ

ದುರದೃಷ್ಟವಶಾತ್ ನಾನೂ ಆ ವಿಡಿಯೋ ನೋಡಿದೆ ಎಂದ ಹರ್ಷಿಕಾ ಪೂಣಚ್ಚ ..! ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ನಟಿ ಹೇಳಿದ್ದೇನು..?

262

ನ್ಯೂಸ್ ನಾಟೌಟ್: ರಾಜ್ಯಾದ್ಯಂತ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಸುದ್ದಿ ಚರ್ಚೆ ಜೋರಾಗಿದ್ದು, ಮೇ.5 ಕ್ಕೆ ರೇವಣ್ಣ ಬಂಧನವಾಗಿದೆ.. ಪ್ರಜ್ವಲ್ ರೇವಣ್ಣ ವಿರುದ್ಧ ಸಾಕಷ್ಟು ವಿರೋಧ ಕೇಳಿ ಬರುತ್ತಿರುವಾಗಲೇ ಈ ಬಗ್ಗೆ ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ದುರದೃಷ್ಟವಶಾತ್ ಆ ವಿಡಿಯೋಗಳಲ್ಲಿ ಒಂದು ವಿಡಿಯೋವನ್ನು ನಾನಿಂದು ನೋಡಿದೆ.

ಇದನ್ನು ನೋಡುವುದೇ ನೋವಿನ ಸಂಗತಿ. ವಿಡಿಯೋ ನಿಜವಾಗಿದ್ದರೆ ಅದನ್ನು ಮಾಡಿದವರಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ನಟಿ ಮೇ 4ರಂದು ಟ್ವೀಟ್ ಮಾಡಿದ್ದಾರೆ. ನಟಿ ಟ್ವೀಟ್ ಮಾಡಿರುವ ಟ್ವಿಟರ್ ಖಾತೆ ವೇರಿಫೈಡ್ ಅಲ್ಲ, ಆದರೆ ಹರ್ಷಿಕಾ ಪೂಣಚ್ಚ ಎಂದೇ ಈ ಟ್ವಿಟರ್ ಖಾತೆ ಇದೆ.. ರಾತ್ರಿ ಸುಮಾರು 8:32ರ ಹೊತ್ತಿಗೆ ಈ ಟ್ವೀಟ್ ಮಾಡಲಾಗಿದೆ. ಅಂತೂ ಹರ್ಷಿಕಾ ಅವರೂ ಈ ಒಂದು ಘಟನೆ ಬಗ್ಗೆ ಧ್ವನಿ ಎತ್ತಿದ್ದಾರೆ. ಇಂತಹ ಕೃತ್ಯ ಮಾಡಿದವರು ಯಾರೇ ಆಗಿದ್ದರೂ ಆ ಹೆಣ್ಣುಮಕ್ಕಳ ಬಗ್ಗೆ ತುಂಬಾ ನೋವಾಯಿತು. ನೆಲದ ಕಾನೂನಿನ ಪ್ರಕಾರ ಅಪರಾಧಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ.

ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಈ ಒಂದು ಪೆನ್​ಡ್ರೈವ್ ಕುರಿತ ಚರ್ಚೆ ಜೋರಾಗಿದೆ. ಈ ಪ್ರಕರಣದ ತನಿಖೆಗೆ ಈಗಾಗಲೇ ಎಸ್​​ಐಟಿ ಟೀಮ್ ರಚಿಸಲಾಗಿದ್ದು ವಿಚಾರಣೆ ಕೂಡಾ ಶುರುವಾಗಿದೆ. ಲೋಕಸಮರದ ಬಿಸಿಯ ಮಧ್ಯೆ ಈ ರೀತಿ ವಿಡಿಯೋಗಳು ಲೀಕ್ ಆಗಿದ್ದು ಮತ್ತಷ್ಟು ಮಹತ್ವ ಪಡೆದಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಅಭಿನಯಿಸಿರುವ ಪೂನಂ ಕೌರ್ ಪ್ರಜ್ವಲ್ ರೇವಣ್ಣ ವಿರುದ್ಧ ಸಿಡಿದೆದ್ದಿದ್ದಾರೆ.

See also  ಹೋಳಿ ಹಬ್ಬದಂದು ಮುಸ್ಲಿಂ ಪುರುಷರು ಟಾರ್ಪಾಲಿನ್‌ ನಿಂದ ಮುಚ್ಚಿಕೊಳ್ಳಿ ಎಂದು ವಿವಾದ ಸೃಷ್ಟಿಸಿದ ಸಚಿವ..! ಹೋಳಿಗೆ ಅಡ್ಡಿಪಡಿಸುವವರು ಜೈಲಿಗೆ ಹೋಗಿ ಅಥವಾ ರಾಜ್ಯವನ್ನು ತೊರೆಯಿರಿ ಎಂದ ರಘುರಾಜ್ ಸಿಂಗ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget