ರಾಜ್ಯ

ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ – ಪತಿ ಭುವನ್ ಪೊನ್ನಣ್ಣ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ, ಕನ್ನಡ ನಾಡಿನಲ್ಲಿ ಕನ್ನಡಿಗರೇ ಮೇಲೆಯೇ ದಾಳಿ

32
Spread the love

ನ್ಯೂಸ್ ನಾಟೌಟ್: ಕೊಡಗಿನ ಬೆಡಗಿ ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ಫ್ರೆಜರ್ ಟೌನ್​ನ ರೆಸ್ಟೋರೆಂಟ್ ಬಳಿ ಈ ಘಟನೆ ನಡೆದಿದೆ.

ದಂಪತಿ ಊಟಕ್ಕೆ ಹೋಗಿದ್ದ ವೇಳೆ ಕಿರಿಕ್ ನಡೆದಿದೆ. ಊಟ ಮುಗಿಸಿ ವಾಪಸ್ ಬರುವ ವೇಳೆ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಕೆಲವರು ಕಿರಿಕ್​ ಮಾಡಿದ್ದಾರೆ. ಪಾರ್ಕಿಂಗ್​ನಿಂದ ಕಾರು ತೆಗೆಯುವಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

ಪುಂಡರು ಭುವನ್ ಕೊರಳಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಕನ್ನಡದಲ್ಲಿ ಮಾತಾಡ್ತಿದ್ದರಿಂದ ಗಲಾಟೆ ಜೋರು ಮಾಡಿದ್ದಾರೆ. ಬಳಿಕ ಕೆಟ್ಟದಾಗಿ ನಿಂದಿಸಿದ್ದಾರೆಂದು ಹರ್ಷಿಕಾ ಪೂಣಚ್ಚ ಆರೋಪಿಸಿದ್ದಾರೆ.

See also  KSRTC: ಡೀಸೆಲ್ ಖಾಲಿಯಾಗಿ ಹುಲಿಕಲ್ ಘಾಟ್‌ ನಲ್ಲಿ ನಿಂತ ಸರ್ಕಾರಿ ಬಸ್..! ಟಿಕೆಟ್ ಹಣ ವಾಪಾಸ್ ಕೊಟ್ಟ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್..!
  Ad Widget   Ad Widget   Ad Widget