ಕರಾವಳಿ

ಶಾಸಕರ ಮೇಲೆ ತಲ್ವಾರ್ ದಾಳಿ ಯತ್ನ : ಸಿಐಡಿಗೆ ವರ್ಗಾಯಿಸಿದ  ರಾಜ್ಯ ಸರಕಾರ

ನ್ಯೂಸ್ ನಾಟೌಟ್ :  ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರನ್ನು ಓವರ್ ಟೇಕ್ ಮಾಡುವಾಗ ನಡೆದ ಮಾತಿನ‌ ಚಕಮಕಿಗೆ ಸಂಬಂಧಿಸಿದ ಕೇಸ್ ನ್ನು ಸರಕಾರವು ಸಿಐಡಿಗೆ ವರ್ಗಾಯಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಗುರುವಾರ ರಾತ್ರಿ ಸುಮಾರು 11.15ಕ್ಕೆ ಶಾಸಕ ಹರೀಶ್​ ಪೂಂಜಾ ಫರಂಗಿಪೇಟೆ ಬಳಿ ಸಂಚರಿಸುತ್ತಿದ್ದಾಗ ಓವರ್ ಟೇಕ್ ಮಾಡುವ ವಿಚಾರದಲ್ಲಿ ಮಾತಿನ‌ಚಕಮಕಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬೆಳಿಗ್ಗೆ ಶಾಸಕರ ಮೇಲೆ ಮಾರಕಾಸ್ತ್ರ ಬೀಸಿದ್ದರು ಎಂದು ದೂರು‌ ನೀಡಲಾಗಿತ್ತು. ಖುದ್ದು ಹರೀಶ್‌ ಪೂಂಜಾ ತಲವಾರು ದಾಳಿ ಯತ್ನ ನಡೆದಿದೆ ಎಂದು ಹೇಳಿಕೆ ನೀಡಿದ್ದರು. ಜಿಹಾದಿಗಳು ಕೃತ್ಯ ನಡೆಸಿದ್ದಾರೆಂದು ಹೇಳಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಫಳ್ನೀರ್ ನಿವಾಸಿ ರಿಯಾಜ್ (38) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಜೊತೆಗೆ ಘಟನೆಗೆ ಸಂಬಂಧಿಸಿದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇದು ಓವರ್ ಟೇಕ್ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಹೊರತು ತಲವಾರು ಬೀಸಿಲ್ಲ, ಕಾರಿನಲ್ಲಿ ಓರ್ವ ಮಾತ್ರ ಇದ್ದ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದರು.

Related posts

ಕಾಂಗ್ರೆಸ್ ಬಂದ ಮೇಲೆ ಪಾಕಿಸ್ಥಾನದ ಧ್ವಜ ಹಾರಿಸುವ ಕೆಲಸಗಳು ನಡೆಯುತ್ತಿವೆ ವೇದವ್ಯಾಸ್ ಕಾಮತ್ ಆರೋಪ! ಗ್ಯಾರಂಟಿಗೆ ಕಂಡೀಶನ್ ಯಾಕೆ? ಇದು ಯಾವ ನ್ಯಾಯ ? ಎಂದ ಶಾಸಕ

ಮಡಿಕೇರಿ:ಅಕ್ರಮವಾಗಿ ಸಾಗಿಸುತ್ತಿದ್ದ 12 ಕೆಜಿ ಗೋಮಾಂಸ ಪತ್ತೆ, ಇಬ್ಬರನ್ನು ವಶಕ್ಕೆ ಪಡೆದ ಅಧಿಕಾರಿಗಳು

ರೈತರಿಗೆ ಮಾತ್ರವಲ್ಲ ಬ್ರಾಹ್ಮಣರಿಗೂ ಹೆಣ್ಣು ಸಿಗ್ತಿಲ್ಲವಂತೆ ಯಾಕೆ..? ಅನಾಥಾಶ್ರಮದ ಹುಡುಗಿಯರನ್ನು ಮದುವೆಯಾದ್ರ ಅರ್ಚಕರು?