ಕರಾವಳಿ

ಪ್ರವೀಣ್‌ ನೆಟ್ಟಾರು ಮನೆಗೆ ಹರೀಶ್‌ ಪೂಂಜಾ ಭೇಟಿ

48
Spread the love

ನ್ಯೂಸ್‌ ನಾಟೌಟ್‌: ದಿ. ಪ್ರವೀಣ್‌ ನೆಟ್ಟಾರು ಅವರ ನೂತನ ಮನೆಗೆ ಬೆಳ್ತಂಗಡಿ ಶಾಸಕ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಗುರುವಾರ ಸಾಯಂಕಾಲ ಭೇಟಿ ನೀಡಿ ಪ್ರವೀಣ್‌ ಅವರ ತಂದೆ ತಾಯಿಯ ಆಶೀರ್ವಾದ ಪಡೆದರು.

ಹಿಂದೂ ಸಮಾಜದ ಅಚ್ಚಳಿಯದ ನಕ್ಷತ್ರ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಜಿಹಾದಿಗಳ ಸಂಚಿಗೆ ವೀರ ಮರಣವನ್ನಪ್ಪಿದ ಬಲಿದಾನಿ ಪ್ರವೀಣ್ ನೆಟ್ಟಾರ್ ಅವರಿಗೆ ಬಿಜೆಪಿ ವತಿಯಿಂದ ನಿರ್ಮಿಸಿದ ನೂತನ ಮನೆಯನ್ನು ಇತ್ತೀಚೆಗೆ ಹಸ್ತಾಂತರಿಸಿ ಗೃಹಪ್ರವೇಶ ನಡೆದಿತ್ತು.

ನೂತನ ಮನೆಗೆ ಭೇಟಿ ನೀಡಿದ ಹರೀಶ್‌ ಪೂಂಜ ಪ್ರವೀಣ್ ನೆಟ್ಟಾರು ಅವರ ಪ್ರತಿಮೆಗೆ ನಮಸ್ಕರಿಸಿ ತಂದೆತಾಯಿಯ ಆಶೀರ್ವಾದ ಪಡೆದು ಕುಟುಂಬದ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭ ಬೆಳ್ಳಾರೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಚಂದ್ರಶೇಖರ ಪನ್ನೆ ಮತ್ತಿತರರು ಇದ್ದರು.

See also  ಸೌಜನ್ಯ ತಾಯಿ, ಕುಟುಂಬದವರ ಮೇಲೆ ಹಲ್ಲೆ ಖಂಡಿಸಿದ ಭಾರತ ಜನವಾದಿ ಮಹಿಳಾ ಸಂಘಟನೆ, ಕುಟುಂಬಕ್ಕೆ ಭದ್ರತೆ ನೀಡಿ ಸರ್ಕಾರಕ್ಕೆ ಒತ್ತಾಯ
  Ad Widget   Ad Widget   Ad Widget