ದೇಶ-ಪ್ರಪಂಚ

ಸಿಸಿಟಿವಿ ಮೂಲಕ ಶಂಕಿತನೆಂದು ಅಮಾಯಕ ವ್ಯಕ್ತಿಗೆ ಹಿಂಸೆ; ಪೊಲೀಸರ ಎಡವಟ್ಟಿಗೆ ಬಲಿಯಾದ ವ್ಯಕ್ತಿ

ನ್ಯೂಸ್ ನಾಟೌಟ್: ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಮಾತಿದೆ. ಅದು ಅಕ್ಷರಶಃ ಸತ್ಯ. ಆದರೆ ತೆಲಂಗಾಣ ಮೇಡಕ್ ಜಿಲ್ಲೆಯಲ್ಲಿ ಪೊಲೀಸರು ಸಿಸಿಟಿವಿ ಫೂಟೇಜ್ ಮೂಲಕ ನಿರಪರಾಧಿಯನ್ನು ಅಪರಾಧಿಯೆಂದು ಭಾವಿಸಿ, ಕಸ್ಟಡಿ ಚಿತ್ರಹಿಂಸೆಯಿಂದ ವ್ಯಕ್ತಿ ಸಾವಿಗೀಡಾದ ಘಟನೆ ನಡೆದಿದೆ.

ಮೆಡಕ್‌ನಲ್ಲಿನ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ಚೈನ್ ಸ್ನಾಚರ್ ಮತ್ತು ಖದೀರ್‌ನ ನಡುವೆ ಸಮಾನರೂಪ ಇದ್ದುದ್ದರಿಂದ ಜನವರಿ 29 ರಂದು ಖದೀರ್‌ನನ್ನು ತಪ್ಪಾಗಿ ಗುರುತಿಸಿ ಬಂಧಿಸಲಾಗಿತ್ತು. ಬಂಧನಕ್ಕೆ ಒಳಗಾದ ಖದೀರ್‌ನಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದರು. ಬಳಿಕ ಫೆ 3 ರಂದು ಬಿಡುಗಡೆ ಮಾಡಿದರು. ಇದಾದ ಬಳಿಕ ಖದೀರ್‌ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾಗಿದ್ದಾರೆ. ಸಾವಿಗೂ ಮುನ್ನ ಖದೀರ್‌ ಅವರು ವಿಡಿಯೋ ಮಾಡಿ ತನಗೆ ಪೊಲೀಸರು ನೀಡುತ್ತಿದ್ದ ಚಿತ್ರಹಿಂಸೆಯನ್ನು ವಿವರಿಸಿದ್ದಾರೆ.
ಸಿಸಿ ಟಿವಿಯಲ್ಲಿ ಕಂಡ ಶಂಕಿತನಂತೆ ಹೋಲಿಕೆ ಇದ್ದುದರಿಂದ ತಪ್ಪಾಗಿ ಗುರುತಿಸಲ್ಪಟ್ಟಿದ್ದು, ಪೊಲೀಸರ ಈ ಘಟನೆಗೆ ಖದೀರ್ ತನ್ನ ಜೀವವನ್ನು ಕಳೆದುಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮೇದಕ್ ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಸೈದುಲು, ಖದೀರ್ ಮತ್ತು ಸರ ಕಿತ್ತುಕೊಳ್ಳುತ್ತಿರುವ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ವ್ಯಕ್ತಿ ಇಬ್ಬರೂ ನೋಡಲು ಒಂದೇ ತರ ಇರುವುದರಿಂದ ಅವರನ್ನು ಅರೆಸ್ಟ್‌ ಮಾಡಲಾಗಿತ್ತು. ಖದೀರ್ ಅಪರಾಧ ಎಸಗಿದವನಲ್ಲ ಎಂದು ತಿಳಿದಾಗ ಅವನನ್ನು ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

Related posts

ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ನಿಧನ..! ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಮಹಿಳಾ ಹಾಸ್ಟೆಲ್‌ ಮುಂದೆ ಅನುಚಿತವಾಗಿ ವರ್ತಿಸಿದ ಯುವಕರ ಗುಂಪು! ವಿರೋಧಿಸಿದ್ದಕ್ಕೆ ಕಲ್ಲು ತೂರಾಟ! ಏನಿದು ‘ರೋಡ್ ರೋಮಿಯೋ’ಗಳ ಸ್ಟೋರಿ?

ಟ್ವಿಟ್ಟರ್‌ಗೆ ಹೊಸ ಸಿಇಒ ನೇಮಿಸಿದರಾ ಎಲಾನ್‌ ಮಸ್ಕ್‌? ಟ್ವಿಟ್ಟರ್ ಸಿಇಒ ಬಗ್ಗೆ ಟ್ವೀಟ್ ನಲ್ಲೇನಿದೆ?