ಕೊಡಗುಕ್ರೈಂವೈರಲ್ ನ್ಯೂಸ್

ಮಡಿಕೇರಿ: ಈಜಲು ಹಾರಂಗಿ ಹಿನ್ನೀರಿನಲ್ಲಿ ಇಳಿದವನ ಕಾಲಿಗೆ ಸಿಲುಕಿಕೊಂಡಿತು ಮೀನಿನ ಬಲೆ..! ಬಲೆಗೆ ಬಿದ್ದ ಮೀನಿನಂತೆ ವಿಲವಿಲ ಒದ್ದಾಡಿ ಪ್ರಾಣಬಿಟ್ಟ..!

32
Spread the love

ನ್ಯೂಸ್ ನಾಟೌಟ್: ಈಗೀಗ ಭಾರಿ ಸೆಕೆ. ಈ ಹಿನ್ನೆಲೆಯಲ್ಲಿ ಯುವಕನೊಬ್ಬ ಸ್ನಾನಕ್ಕೆಂದು ನೀರಿಗೆ ಇಳಿದಿದ್ದಾನೆ. ನೀರಿಗೆ ಇಳಿದವನೆ ಹಾಯಾಗಿ ಈಜಾಡಲು ಶುರು ಮಾಡಿದ್ದಾನೆ. ಆದರೆ ವಿಧಿಯಾಟ ಬೇರೆಯೇ ಇತ್ತು ನೋಡಿ.

ಆತ ಮೀನು ಹಿಡಿಯಲು ಹಾಕಿದ ಬಲೆಯೊಳಗೆ ಸಿಲುಕಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಈ ದುರ್ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹೆರೂರು ಬಳಿ‌ ಇರುವ ಹಾರಂಗಿ ಹಿನ್ನೀರಿನಲ್ಲಿ ನಡೆದಿದೆ. ಮೃತಪಟ್ಟವನನ್ನು ಬಾಲು(40 ವರ್ಷ) ಎಂದು ಗುರುತಿಸಲಾಗಿದೆ. ಬಿಸಿಲ ಬೇಗೆಯ ಹಿನ್ನಲೆ ಈಜಲು ತೆರಳಿದಾಗ ಈ ದುರ್ಘಟನೆ ನಡೆದಿದೆ. ಇದೀಗ ಸ್ಥಳೀಯರು ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಶುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಜಾಲ್ಸೂರು: ರಸ್ತೆ ದಾಟುತ್ತಿದ್ದ ವ್ಯಕ್ತಿಯ ಪಾಲಿಗೆ ಯಮನಾದ ಬೈಕ್ , ತಲೆಗೆ ಗಂಭೀರ ಗಾಯಗೊಂಡು ಉಸಿರು ನಿಲ್ಲಿಸಿದ ವ್ಯಕ್ತಿ
  Ad Widget   Ad Widget   Ad Widget