ಕ್ರೈಂಬೆಂಗಳೂರುವೈರಲ್ ನ್ಯೂಸ್

ಹನುಮಾನ್ ಚಾಲೀಸಾ ಹಾಕಿದವನ ಮೇಲಿನ ಹಲ್ಲೆ ಕೇಸ್‌ ಗೆ ಬಿಗ್ ಟ್ವಿಸ್ಟ್ ..! ಅಂಗಡಿ ಮಾಲೀಕನ ಮೇಲೆಯೇ ಎಫ್‌ ಐಆರ್‌..!

ನ್ಯೂಸ್ ನಾಟೌಟ್: ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್‌ ಹಲವು ತಿರುವುಗಳನ್ನು ಪಡೆದು ರಾಜಕೀಯ ನಾಯಕರ ಎಂಟ್ರಿಯೂ ಆಗಿತ್ತು, ಆದರೆ ಬೆಂಗಳೂರಿನ ನಗರಪೇಟೆಯಲ್ಲಿ ನಡೆದಿದ್ದ ಈ ಕೇಸ್ ಗೆ ಈಗ ಟ್ವಿಸ್ಟ್ ಸಿಕ್ಕಿದ್ದು, ಹಲ್ಲೆಗೊಳಗೊಳಗಾದ ಮುಖೇಶ್ ವಿರುದ್ದವೇ ಎಫ್‌ಐಆರ್‌(FIR) ದಾಖಲಾಗಿದೆ.

ಕೋರ್ಟ್ ನಿರ್ದೇಶನ ಮೇರೆಗೆ ಬಂಧನಕ್ಕೆ ಒಳಗಾದ ಸುಲೇಮಾನ್ ತಾಯಿ ನೀಡಿದ ದೂರಿನ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್‌ 506(ಕ್ರಿಮಿನಲ್‌ ಬೆದರಿಕೆ), 504(ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 323(ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ. ರಂಜಾನ್ ಇದ್ದರೂ ಭಕ್ತಿ ಗೀತೆ ಹಾಕಿ ಮುಖೇಶ್‌ ಕಿರಿಕ್ ಮಾಡುತ್ತಿದ್ದ. ಮಾರ್ಚ್ 17 ರಂದು ಸುಲೇಮಾನ್ ಸೇರಿ ಸ್ನೇಹಿತರು ಮುಖೇಶ್‌ಗೆ ಪ್ರಶ್ನಿಸಿದ್ದರು.

ಪವಿತ್ರ ರಂಜಾನ್ ಹಬ್ಬವಿದೆ, ಮೂರು ಸಾವಿರ ಮಂದಿ ಇದೇ ರಸ್ತೆಯಲ್ಲಿ ಪ್ರಾರ್ಥನೆಗೆ ಹೋಗುತ್ತಾರೆ. ಇಷ್ಟು ಸೌಂಡ್ ಇಟ್ಟು ಹಾಡುಗಳನ್ನು ಹಾಕುವುದು ಯಾಕೆ ಎಂದು ಕೇಳಿದ್ದರು ಎನ್ನಲಾಗಿದೆ. ಪ್ರಶ್ನೆ ಕೇಳಿದ್ದಕ್ಕೆ ನನ್ನ ಮಗನ ಮೇಲೆ ಮುಖೇಶ್ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಮುಖೇಶ್‌ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಪ್ರತಿಭಟಿಸಿದ್ದರು ಹೀಗಾಗಿ ಪ್ರಕರಣದ ಮೇಲೆ ಆತನ ಬಂಧನವಾಗಿತ್ತು. ಈಗ ಅಂಗಡಿ ಮಾಲಿಕನಿಗೂ ಸಂಕಷ್ಟ ಎದುರಾಗಿದೆ.

Follow us for more updates:

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

Related posts

ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ ಗೂಳಿ..! 15ಕ್ಕೂ ಹೆಚ್ಚು ಮಂದಿಗೆ ಗಾಯ..! ಇಲ್ಲಿದೆ ವೈರಲ್ ವಿಡಿಯೋ

ದನದ ಕೊಟ್ಟಿಗೆಯಲ್ಲಿ ಖೋಟಾ ನೋಟು ಪ್ರಿಂಟ್‌ ಮಾಡುತ್ತಿದ್ದ ತಂದೆ – ಮಗ ಅರೆಸ್ಟ್..! ನೋಟು ಮುದ್ರಣಕ್ಕೆ ಬಳಸುತ್ತಿದ್ದ ಸಾಮಗ್ರಿಗಳು ವಶಕ್ಕೆ..!

ಸಂಪಾಜೆ: ತಡರಾತ್ರಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು