ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ನನಗೆ ಅದನ್ನು ಮುಟ್ಟಲು ಬಿಡಲಿಲ್ಲ ಆದ್ರೆ ಹೀರೋ ಕೈಲಿ ಮುಟ್ಟಿಸಿಕೊಂಡಳು..! ಖ್ಯಾತ ನಟಿ ಹನ್ಸಿಕಾ ಬಗ್ಗೆ ಆ ನಟ ಹೀಗೆ ಹೇಳಿದ್ದೇಕೆ?

200

ನ್ಯೂಸ್ ನಾಟೌಟ್ : ನಟಿ ಹನ್ಸಿಕಾ ಮೊಟ್ವಾನಿ ಬಗ್ಗೆ ತಮಿಳು ಹಾಸ್ಯನಟ ರೋಬೋ ಶಂಕರ್ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ.ಆದಿ ಪಿನಿಶೆಟ್ಟಿ ನಾಯಕನಾಗಿ ನಟಿಸಿ ಹನ್ಸಿಕಾ ಮೊಟ್ವಾನಿ ನಾಯಕಿಯಾಗಿ ನಟಿಸಿರುವ ‘ಪಾರ್ಟ್ನರ್’ ಸಿನಿಮಾದ ಟ್ರೈಲರ್ ಲಾಂಚ್​ನಲ್ಲಿ ಮಾತನಾಡಿದ ನಟ ರೋಬೋ ಶಂಕರ್, ”ಸಿನಿಮಾದಲ್ಲಿ ದೃಶ್ಯವೊಂದಿದೆ ಅದರಲ್ಲಿ ನಾನು ಹನ್ಸಿಕಾ ಮೊಟ್ವಾನಿಯ ಕಾಲು ಮುಟ್ಟಬೇಕಿತ್ತು. ನಾನೂ ಹಾಗೂ ನಿರ್ದೇಶಕರು ಬೇಡಿಕೊಂಡರು ಆ ಸೀನ್ ​ನಲ್ಲಿ ನಟಿಸಲು ಹನ್ಸಿಕಾ ಮೊಟ್ವಾನಿ ಒಪ್ಪಲಿಲ್ಲ. ನನ್ನನ್ನು ಅವರ ಕಾಲು ಮುಟ್ಟಲು ಬಿಡಲಿಲ್ಲ, ಕನಿಷ್ಟ ಕಾಲಿನ ಬೆರಳು ಮುಟ್ಟಲು ಸಹ ಬಿಡಲಿಲ್ಲ. ಆದರೆ ನಾಯಕ ನಟ ಆದಿ ಪಿನಿಶೆಟ್ಟಿ ಕೈಲಿ ಮುಟ್ಟಿಸಿಕೊಂಡರು. ಹೀರೋ ಆಗಿರುವುದರಿಂದ ಕೆಲವು ಸವಲತ್ತುಗಳಿವೆ” ಎಂದು ಹೇಳಿದ್ದರು.

ಬಾಲಿವುಡ್ ಗೆ ಹೋಲಿಸಿದರೆ ತುಸು ಹೆಚ್ಚೇ ನಾಯಕ ಪ್ರಧಾನವಾಗಿರುವ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಾಯಕಿಯರನ್ನು ಗ್ರ್ಯಾಟೆಂಡ್ ಆಗಿ ತೆಗೆದುಕೊಂಡು ಬಿಟ್ಟಿದ್ದಾರೆ. ಇದೇ ಕಾರಣದಿಂದ ನಟಿಯರ ಬಗ್ಗೆ ಕೀಳು ಅಭಿರುಚಿಯ ಮಾತುಗಳು, ಹೇಳಿಕೆಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಇದೇ ಸಾಲಿಗೆ ಸೇರುತ್ತದೆ ಹನ್ಸಿಕಾ ಮೊಟ್ವಾನಿ(Hansika Motwani) ಬಗ್ಗೆ ಸಹ ನಟನೊಬ್ಬನ ಹೇಳಿಕೆ ನೀಡಿದ್ದಾರೆ. ನಟಿಯರ ವ್ಯಕ್ತಿತ್ವದ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದು, ದೇಹದ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಟ ರೋಬೋ ಶಂಕರ್ ಈ ಮಾತುಗಳನ್ನು ಹೇಳಿದಾಗ ನಟಿ ಹನ್ಸಿಕಾ ಮೊಟ್ವಾನಿ ಹಾಗೂ ಆದಿಪಿನಿಶೆಟ್ಟಿ ಸಹ ವೇದಿಕೆ ಮೇಲಿದ್ದರು. ವೇದಿಕೆ ಮುಂಭಾಗದಲ್ಲಿದ್ದ ಪತ್ರಕರ್ತರೊಬ್ಬರು ರೋಬೋ ಶಂಕರ್ ಮಾತುಗಳನ್ನು ಅಲ್ಲಿಯೇ ತೀವ್ರವಾಗಿ ಖಂಡಿಸಿ ಇಂಥಹಾ ನಟರಿಗೆ ತಕ್ಕ ಶಾಸ್ತಿ ಆಗಬೇಕು ಎಂದರು. ಪತ್ರಕರ್ತರ ಮಾತುಗಳಿಗೆ ಆದಿಪಿನಿಶೆಟ್ಟಿ ತಲೆ ಆಡಿಸಿ ಹೌದೆಂದರು. ನಟಿ ಹನ್ಸಿಕಾ ಸಹ ನಿಜವೆಂದಾಗಿ ತಲೆ ಆಡಿಸಿದರು. ಬಳಿಕ ನಟ ರೋಬೋ ಶಂಕರ್, ನನ್ನ ಮಾತುಗಳನ್ನು ತಮಾಷೆಯಾಗಿ ತೆಗೆದುಕೊಳ್ಳುವಂತೆ, ಗಂಭೀರವಾಗಿ ತೆಗೆದುಕೊಳ್ಳದಂತೆ ಮನವಿ ಮಾಡಿದರು.

See also  ಉಡುಪಿ: ಚಲಿಸುತ್ತಿರುವ ರೈಲಿನಿಂದ ನಿದ್ದೆ ಮಂಪರಿನಲ್ಲಿ ಇಳಿದ ಯುವತಿ..! ಬಿದ್ದು ಕೈ ಮುರಿದುಕೊಂಡ ವೈದ್ಯಕೀಯ ವಿದ್ಯಾರ್ಥಿನಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget