ಕರಾವಳಿಪುತ್ತೂರು

ಎಲ್ಲ ಹಿಂದು ಯುವಕರ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಿ: ಶರಣ್ ಪಂಪ್‌ವೆಲ್

296

ನ್ಯೂಸ್‌ ನಾಟೌಟ್‌: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಎಲ್ಲ ಹಿಂದು ಕಾರ್ಯಕರ್ತರ ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎ ತಂಡಕ್ಕೆ ವಹಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಎನ್‌ಐಎ ತನಿಖೆ ನಡೆಸಿದ್ದರಿಂದ ನೈಜ ಆರೋಪಿಗಳ ಬಂಧನ ಆಗಿದೆ. ಆದರೆ ಜೈಲಿನಲ್ಲಿರುವ ಆರೋಪಿಯನ್ನೇ ಪುತ್ತೂರಿನಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಇದಕ್ಕೆ ಚುನಾವಣೆ ಆಯೋಗ ಅವಕಾಶ ನೀಡಿದ್ದು ಹೇಗೆ? ದೇಶದ್ರೋಹ ಕಾಯ್ದೆಯಡಿ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿ ಇವರು ಯಾವ ರೀತಿಯ ಸಂದೇಶ ಕೊಡುತ್ತಿದ್ದಾರೆ ಎಂದು ಶರಣ್ ಪ್ರಶ್ನಿಸಿದ್ದಾರೆ?

ದ.ಕ. ಜಿಲ್ಲೆಯಲ್ಲಿ ಪ್ರಶಾಂತ್‌ ಪೂಜಾರಿ, ದೀಪಕ್ ರಾವ್, ಶರತ್ ಮಡಿವಾಳ ಸೇರಿದಂತೆ ಕೊಲೆಯಾದ ಎಲ್ಲ ಹಿಂದು ಕಾರ್ಯಕರ್ತರ ಪ್ರಕರಣದ ತನಿಖೆಯಾಗಬೇಕು. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಯಾವ ರೀತಿಯ ತನಿಖೆಯಾಗಿದೆ. ಅದೇ ರೀತಿಯ ತನಿಖೆ ಉಳಿದ ಪ್ರಕರಣಗಳಲ್ಲೂ ಆಗಬೇಕು. ಪಿಎಫ್‌ಐ ಸಂಘಟನೆ ನಿಷೇಧಕ್ಕಾಗಿ ವಿಶ್ವ ಹಿಂದು ಪರಿಷತ್‌ ನಿರಂತರವಾಗಿ ಪ್ರತಿಭಟನೆ ಮಾಡಿತ್ತು. ಕಡೆಗೂ ಕೇಂದ್ರ ಸರ್ಕಾರ ಪಿಎಫ್‌ಐ ನಿಷೇಧ ಮಾಡಿದೆ. ನಿಷೇಧ ನಮ್ಮ ಪಾಲಿಗೆ ಸಿಕ್ಕಿದ ಜಯ. ಆದರೆ ಇದೀಗ ನಿಷೇಧಿತ ಸಂಘಟನೆಯ ಆರೋಪಿಯೇ ಚುನಾವಣೆಗೆ ಸ್ಪರ್ಧಿಸುತ್ತಿರುವುದನ್ನು ನಾವು ಸಹಿಸಲ್ಲ ಎಂದು ಶರಣ್ ಪಂಪ್‌ವೆಲ್ ಹೇಳಿದ್ದಾರೆ.

See also  ಮೂಲ್ಕಿ: ತಾಯಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಪಾಪಿ ಪುತ್ರ, ಆಕೆ ವಿರೋಧಿಸಿದಾಗ ಕತ್ತು ಹಿಸುಕಿ ಕೊಂದೇ ಬಿಟ್ಟ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget