Latestಕ್ರೈಂರಾಜ್ಯ

ಹಂಪಿ ಉತ್ಸವದ ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್‌ ಶ್ವಾನ ಸಾವು..! ಬಾಂಬ್, ಸ್ಪೋಟಕ ಪತ್ತೆ ದಳದಲ್ಲಿ ಪರಿಣಿತಿ ಹೊಂದಿದ್ದ ಶ್ವಾನ ಅಪಘಾತಕ್ಕೆ ಬಲಿ..!

261
Pc Cr: Vijayakarnataka
Spread the love

ನ್ಯೂಸ್ ನಾಟೌಟ್: ಜಿಲ್ಲಾ ಪೊಲೀಸ್ ಘಟಕದ ಕಾವಲಾಗಿ ಕಾರ್ಯ ನಿರ್ವಹಿಸುತ್ತ ಪೊಲೀಸರ ಮೆಚ್ಚುಗೆ ಗಳಿಸಿದ್ದ ಶ್ವಾನ ಕನಕ ದುರಂತ ಅಂತ್ಯ ಕಂಡಿದೆ. ಹಂಪಿ ಉತ್ಸವದ ಕರ್ತವ್ಯಕ್ಕೆ ತೆರಳಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಶ್ವಾನದ ಅಂತ್ಯಕ್ರಿಯೆಯನ್ನು ಸೋಮವಾರ(ಮಾ.3) ನೆರವೇರಿಸಲಾಗಿದೆ.

ಲ್ಯಾಬ್ರಡರ್ ರಿಟ್ರಿವರ್ ತಳಿಯ ಕನಕ 2019 ರ ಜನವರಿ 28ರಂದು ಜನಿಸಿತ್ತು. ಶ್ವಾನಕ್ಕೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿತ್ತು. ಬಾಂಬ್, ಸ್ಪೋಟಕ ಪತ್ತೆ ದಳದಲ್ಲಿ ಪರಿಣಿತಿ ಹೊಂದಿ, ಹಾವೇರಿ ಪೊಲೀಸ್ ಘಟಕದಲ್ಲಿ 2019ರ ಡಿಸೆಂಬರ್‌ನಿಂದ ಕರ್ತವ್ಯ ನಿರ್ವಹಿಸುತ್ತಿತ್ತು.

ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಕರ್ತವ್ಯಕ್ಕೆ ಪೊಲೀಸ್ ತಂಡದೊಂದಿಗೆ ತೆರಳಿದ್ದ ಈ ಶ್ವಾನವು ಮಾರ್ಚ್ 2 ರಂದು ಬೆಳಗ್ಗೆ ವಾಕಿಂಗ್‍ ಗೆ ತೆರಳಿದ ಸಂದರ್ಭದಲ್ಲಿ ಕಮಲಾಪುರ ಕಡೆಯಿಂದ ಬರುತ್ತಿದ್ದ ಸಿಂಧನೂರು ಡೀಪೋದ ಬಸ್, ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಶ್ವಾನಕ್ಕೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಶ್ವಾನವನ್ನು ಚಿಕಿತ್ಸೆಗೆ ಹೊಸಪೇಟೆ ಪಶು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಕನಕ ಶ್ವಾನದ ನಿಧನಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ಘಟಕದಿಂದ ಸಂತಾಪ ಸೂಚಿಸಿದ್ದಾರೆ.

See also  ದೇವರ ಪಾದ ಸೇರಿದ ಜನಮೆಚ್ಚಿದ ಉಪನ್ಯಾಸಕ, ಹಲವಾರು ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಹೇಳಿದ್ದ ಉಪನ್ಯಾಸಕರು ಇನ್ನು ನೆನಪು ಮಾತ್ರ
  Ad Widget   Ad Widget   Ad Widget   Ad Widget