ಕರಾವಳಿಪುತ್ತೂರುಸುಳ್ಯ

ಸೌದೆ ಒಡೆಯಲು ಬಂದಿದೆ ಹ್ಯಾಮರ್‌ ಯಂತ್ರ

267

ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಸೌದೆ ಒಡೆಯಬೇಕಾದರೆ ಕೂಲಿ ಸಮಸ್ಯೆ ಪ್ರಮುಖವಾಗಿದೆ. ಇದಕ್ಕೆ ಬೇಕಾದ ಕೂಲಿಯಾಳು ಸಿಗದೆ ಅಧಿಕ ವ್ಯಯ ಮಾಡಬೇಕಾಗುತ್ತದೆ. ಇದೀಗ ಈ ಸಮಸ್ಯೆಗೆ ಮುಕ್ತಿ ನೀಡಲು ಪಂಜದ ದೇವಿ ಹ್ಯಾಮರ್ಸ್‌ನಲ್ಲಿ ಹೊಸ ಯಂತ್ರವನ್ನು ಸಿದ್ಧಗೊಳಿಸಲಾಗಿದೆ.

ಈ ಯಂತ್ರದಲ್ಲಿ ಚೂಪಾದ ಆಫ್ ಹ್ಯಾಮರ್‌ ಅಳವಡಿಸಲಾಗಿದೆ. ಇದರಿಂದ ತುಂಬಾ ಸುಲಭವಾಗಿ ಎಷ್ಟು ದೊಡ್ಡ ಸೌದೆಗಳನ್ನೂ ಕೆಲವೇ ಸೆಕೆಂಡುಗಳಲ್ಲಿ ಭಾಗ ಮಾಡಬಹುದು. ಅತೀ ಕಡಿಮೆ ಸಮಯದಲ್ಲಿ ಕೆಲಸ ನಿರ್ವಹಿಸುವ ಈ ಯಂತ್ರಕ್ಕೆ ಒಮ್ಮೆ ಮಾತ್ರ ಬಂಡವಾಳ ಹೂಡಿ ಖರೀದಿಸಿದರೆ ಅನಂತರ ಹೆಚ್ಚಿನ ಕೆಲಸ ಮಾಡಲಾಗುತ್ತದೆ ಎನ್ನುತ್ತಾರೆ ಹ್ಯಾಮರ್‌ ಯಂತ್ರ ಸಿದ್ಧಗೊಳಿಸಿದ ನವೀನ್ ಕುಮಾರ್ ಚೀಮುಳ್ಳು.

ಈ ಯಂತ್ರವನ್ನು ಒಂದು ಕಡೆಯಿಂದ ಇನ್ನೊಂದು ಎಳೆದುಕೊಂಡು ಹೋಗಲು ಚಕ್ರವನ್ನೂ ಅಳವಡಿಸಿಕೊಡಲಾಗುವುದು. ಹ್ಯಾಮರ್‌ ಯಂತ್ರ ಬೇಕಾದವರು 9448625343 ಸಂಪರ್ಕಿಸಿದರೆ ಕೇವಲ 10 ದಿನಗಳಲ್ಲಿ ಸಿದ್ಧಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ನವೀನ್ ಕುಮಾರ್ ಚೀಮುಳ್ಳು ತಿಳಿಸಿದ್ದಾರೆ.

See also  ಕುಟುಂಬಸ್ಥರಿಗೂ ಬೇಡವಾದ ಸುಳ್ಯದ ಬಸ್ ಚಾಲಕ..! ಕಾಲು ಕೊಳೆತು ಬದುಕೇ ಆಯಿತು ನರಕ..! ಮಾನವೀಯತೆ ಮೆರೆದ ಸುಳ್ಯದ ಆಂಬ್ಯುಲೆನ್ಸ್ ಚಾಲಕರು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget