Uncategorized

ಹಜಮಾಡಿ: ಸದ್ಯಕ್ಕಿಲ್ಲ ಹೆಚ್ಚುವರಿ ಶುಲ್ಕ ಸಂಗ್ರಹ

ನ್ಯೂಸ್ ನಾಟೌಟ್: ಸುರತ್ಕಲ್ ಟೋಲ್ ಗೇಟ್ ನಲ್ಲಿ ಸದ್ಯಕ್ಕೆ ಹೆಚ್ಚುವರಿ ಹಣ ಸಂಗ್ರಹ ಇಲ್ಲ ಎನ್ನುವ ನಿರ್ಧಾರಕ್ಕೆ ಬರಲಾಗಿದೆ.

ಕರಾವಳಿಯಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ವಿಲೀನ ಪ್ರಕ್ರಿಯೆ ನಡೆಸಿಲ್ಲ. ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಜನರಿಗೆ ಟೋಲ್ ಹೆಚ್ಚಳದ ಶಾಕ್ ಸರಕಾರ ಖಂಡಿತವಾಗಿಯೂ ನೀಡಲಿದೆ. ಟೋಲ್ ಶುಲ್ಕವನ್ನು ಹೆಜಮಾಡಿಯೊಂದಿಗೆ ವಿಲೀನಗೊಳಿಸಲು ತೀವ್ರ ವಿರೋಧದ ನಡುವೆಶಾಸಕ ರಘುಪತಿ ಭಟ್ ಅವರು ಕೇಂದ್ರ ಹೆದ್ದಾರಿ ಸಚಿವರನ್ನು ಭೇಟಿಯಾಗಿ ತಮ್ಮ ಮನವಿ ಸಲ್ಲಿಸಿದ್ದಾರೆ. ವಾಹನ ಸವಾರರಿಗೆ ಹೊರೆಯಾಗುವ ಸಂಬಂಧ ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಯಾವ ನಿರ್ಧಾರಕ್ಕೆ ಬರಲಿದೇ ಎನ್ನುವುದೇ ಕುತೂಹಲ. 

Related posts

ಅಪ್ರಾಪ್ತೆ ಅತ್ಯಾಚಾರಗೈದು ತಲೆಮರೆಸಿಕೊಂಡಿದ್ದ ಕಾಮುಕ 10 ವರ್ಷದ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ..!

ಹಿಜಾಬ್ ವಿರುದ್ಧ ಬೀದಿಗಿಳಿದ ಇರಾನ್ ಮಹಿಳೆಯರು

ಮಧ್ಯರಾತ್ರಿ ಮನೆ ಮೇಲೆ ಗುಡ್ಡ ಕುಸಿತ, ಜೀವ ಉಳಿಸಿಕೊಂಡ್ರು ಹೆಣ್ಮಕ್ಕಳು