ಕರಾವಳಿಕೊಡಗುಪುತ್ತೂರುರಾಜಕೀಯವೈರಲ್ ನ್ಯೂಸ್ಸುಳ್ಯ

ಗೋಕರ್ಣದಲ್ಲಿ ಕುಮಾರಸ್ವಾಮಿಗೆ ಬಿಸಿಮುಟ್ಟಿಸಿದ ಅರ್ಚಕರು !

230

ಬ್ರಾಹ್ಮಣ ಸಿಎಂ ವಿವಾದ ಸ್ಪಷ್ಟೀಕರಣಕ್ಕೆ ಬಿಗಿಪಟ್ಟು

ನ್ಯೂಸ್‌ನಾಟೌಟ್‌: ಮಾಜಿ ಸಿಎಂ ಕುಮಾರಸ್ವಾಮಿ ಆಡಿದ ಬ್ರಾಹ್ಮಣ ಸಿಎಂ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಬುಧವಾರ ಗೋಕರ್ಣಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರಿಗೆ ಅರ್ಚಕರು ನೇರವಾಗಿ ಪ್ರಶ್ನಿಸಿ ನಿಮ್ಮ ಹೇಳಿಕೆಯಿಂದ ನಮ್ಮಸಮುದಾಯಕ್ಕೆ ಬೇಸರವಾಗಿದೆ. ಈ ಬಗ್ಗೆ ಗೋಕರ್ಣದಲ್ಲೇ ಸ್ಪಷ್ಟೀಕರಣ ನೀಡುವಂತೆ ಪಟ್ಟು ಹಿಡಿದರು.

ಇಲ್ಲಿನ ದೇವಳದ ರಥಬೀದಿಯಲ್ಲೇ ನರಸಿಂಹ ಉಪಾಧ್ಯಾಯ ಎಂಬ ಅರ್ಚಕರು ಕುಮಾರಸ್ವಾಮಿಯ ಹೇಳಿಕೆಯನ್ನು ಪ್ರಸ್ತಾಪಿಸಿ ನಿಮ್ಮ ಕುಟುಂಬದ ಬಗ್ಗೆ ಗೌರವವಿದೆ, ಆದರೆ ನೀವು ಆಡಿದ ಬ್ರಾಹ್ಮಣ ವಿರೋಧಿಯಿಂದ ಹೇಳಿಕೆ ನಮ್ಮ ಸಮುದಾಯಕ್ಕೆ ಬೇಜಾರಾಗಿದೆ. ಈ ಬಗ್ಗೆ ನಮ್ಮ ಊರಲ್ಲೇ ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭ ಅರ್ಚಕರನ್ನು ಸಮಾಧಾನಿಸಲು ಯತ್ನಿಸಿದ ಕುಮಾರಸ್ವಾಮಿ, ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ. ಬ್ರಾಹ್ಮಣರಿಗೆ ಗೌರವ ಕೊಡುತ್ತೇನೆ. ರಾಮಕೃಷ್ಣಹೆಗ್ಡೆಯವರನ್ನು ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು. ನಾನು ಬಿಜೆಪಿಯಲ್ಲಿ ನಡೆಯುತ್ತಿರುವ ಪೇಶ್ವೆ ಬಗ್ಗೆ ಚರ್ಚಿಸಿದ್ದು ಎಂದು ಸ್ಪಷ್ಟೀಕರಣ ನೀಡಿದರು.

See also  ಸುಳ್ಯ: 'ಪ್ರಗತಿ ಅಚ್ಚು' ಸೇರಿದಂತೆ ಮೂವರು ಆಪತ್ಪಾಂಧವರಿಗೆ 'ನ್ಯೂಸ್ ನಾಟೌಟ್' ಕಚೇರಿಯಲ್ಲಿ ಗೌರವ, ನಮಗಾಗಿ ದುಡಿಯುವ ಜೀವ ರಕ್ಷಕರಿಗೆ ಇರಲಿ ನಿಮ್ಮದೂ ಒಂದು ಮೆಚ್ಚುಗೆ, ವಿಡಿಯೋ ವೀಕ್ಷಿಸಿ
  Ad Widget   Ad Widget   Ad Widget   Ad Widget   Ad Widget