Uncategorized

“ಕೆಲವರು ನನ್ನನ್ನು ದಾರಿ ತಪ್ಪಿಸಿದ್ದರು, ಆದರೆ ಇಂದು ಕಣ್ಣು ತೆರೆಯಿತು”ಎಚ್‌ ಡಿ. ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ..?

ನ್ಯೂಸ್‌ ನಾಟೌಟ್‌: ದೇಶಪ್ರೇಮದ ಶಿಕ್ಷಣ ನೀಡುತ್ತಿರುವ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಕಾರ್ಯಕ್ರಮಕ್ಕೆ ಬಾರದೇ ಇದ್ದರೆ ಜೀವನದ ದೊಡ್ಡ ನಷ್ಟವಾಗುತ್ತಿತ್ತು. ಈ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ (Dr. Prabhakar bhat kalladka) ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕೆಲವರು ದಾರಿ ತಪ್ಪಿಸುವ ಮಾಹಿತಿ ನೀಡಿದ್ದರು. ಇಂದು ನನ್ನ ಕಣ್ಣು ತೆರೆದಿದೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ಆಯೋಜಿಸಿದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ ಹೆಚ್‌ಡಿ ಕುಮಾರಸ್ವಾಮಿ ಅವರು ಪ್ರಭಾಕರ ಭಟ್‌ ಅವರನ್ನು ಹಾಡಿ ಹೊಗಳಿದ್ದಾರೆ.

ಈ ಹಿಂದೆ ಒಂದು ರೀತಿಯಾಗಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಈ ಕಾರ್ಯಕ್ರಮ ಭಾಗವಹಿಸಿದ್ದು ಹೇಗೆ ಎಂದು ಕೆಲವರು ಯೋಚಿಸಬಹುದು. ಅಂದು ಕೆಲವರು ನನ್ನನ್ನು ದಾರಿ ತಪ್ಪಿಸಿದ್ದರು. ನಾನು ತಪ್ಪು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಈ ಕಾರ್ಯಕ್ರಮ ಜೀವನದ ಅವಿಸ್ಮರಣೀಯ ಕ್ಷಣ. ಇಲ್ಲಿ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದೆ. ದೇಶದ ಕೀರ್ತಿ ಎತ್ತಿ ಹಿಡಿದ ವಿಜ್ಞಾನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಗುರುಕುಲ ಪರಂಪರೆಯನ್ನು ಸಂಸ್ಕೃತಿಗಳನ್ನು ನೀಡಲಾಗುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಉತ್ತಮ ಶಿಸ್ತಿನ ಬದುಕನ್ನು ಇಲ್ಲಿ ಕಲಿಸಿ ಕೊಡಲಾಗುತ್ತದೆ. ಮಾನವೀಯತೆ ವಿಕಸನವನ್ನು ಇಲ್ಲಿ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಕಲೆಗಳನ್ನು ಮಕ್ಕಳಲ್ಲಿ ಮಾಡಿಸಿದ್ದಾರೆ ಎಂದು ತನ್ನ ಬಾಲ್ಯದ ನೆನಪುಗಳನ್ನು ತೆರೆದಿಟ್ಟರು. ಚಂದ್ರಯಾನ ಉಡಾವಣೆಯನ್ನು ಕಣ್ಣಿಗೆ ಕಟ್ಟುವ ಹಾಗೆ ತೋರಿಸಿದ್ದೀರಿ. ಮಕ್ಕಳಿದ್ದಾಗ ರಾಮನ ಭಜನೆ ಮಾಡಿದನ್ನು ಇವತ್ತು ಮತ್ತೆ ನೆನಪಿಸಿದ್ದೀರಿ. ಪ್ರಭಾಕರ ಭಟ್ ಬದುಕಿನ ಒಳ್ಳೆಯ ನಡವಳಿಕೆ ಕಲಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕಣ್ಣು ತೆರೆಸುತ್ತಿದ್ದೀರಿ ಎಂದು ಹೇಳಿದರು. ತನ್ನ ಭಾಷಣದ ಕೊನೆಯಲ್ಲಿ ಕುಮಾರಸ್ವಾಮಿ ಅವರು “ಜೈ ಶ್ರೀರಾಮ್” ಎಂದು ಘೋಷಣೆ ಕೂಗಿ ಮುಗಿಸಿದ್ದು ವಿಶೇಷವಾಗಿತ್ತು.

Related posts

ಶಾಲೆಗೆಂದು ರಸ್ತೆ ಬದಿ ಅಟೋಗೆ ಕಾಯುತ್ತಿದ್ದ ಬಾಲಕಿಗೆ ಬೈಕ್ ಡಿಕ್ಕಿ:ಗಂಭೀರ ಗಾಯ

೫೦೦ರ ನೋಟು ತಂದ ಆಪತ್ತು- ಕೆಂಡಾಮಂಡಲನಾದ ಗಂಡ, ಪತ್ನಿಗೆ ಅಕ್ರಮ ಸಂಬಂಧದ ಕಥೆ ಕಟ್ಟಿ ಪತ್ನಿಯನ್ನೇ ಮುಗಿಸಿದ- ಮೂವರು ಮಕ್ಕಳ ಕೊಲೆಗೂ ಯತ್ನ

ರಥೋತ್ಸವದ ವೇಳೆ ಗುರುಬಸವೇಶ್ವರ ರಥದ ಸ್ಟೇರಿಂಗ್ ಕಟ್..! ಸ್ಕೂಟಿ ಹಾಗೂ ಬೈಕ್‌ ಗಳು ರಥದಡಿಗೆ ಸಿಲುಕಿ ಅಪ್ಪಚ್ಚಿ..!