ಕ್ರೈಂವೈರಲ್ ನ್ಯೂಸ್

ಸರ್ಕಾರಿ ನಿವಾಸದಲ್ಲಿ ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಶವವಾಗಿ ಪತ್ತೆ..! ಮೃತದೇಹ ಪತ್ತೆಯಾದ ಕೋಣೆಯ ನೆಲದ ಮೇಲೆ ರಕ್ತದ ಕಲೆಗಳು..!

ನ್ಯೂಸ್ ನಾಟೌಟ್ : ಅಯೋಧ್ಯೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ADM) ಗುರುವಾರ(ಅ.24) ತಮ್ಮ ಅಧಿಕೃತ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸುರ್ಜಿತ್ ಸಿಂಗ್ (58) ಎಂಬವರು ಕೊತ್ವಾಲಿ ನಗರದ ಸಿವಿಲ್ ಲೈನ್ಸ್ ಪ್ರದೇಶದ ಸುರ್ಸಾರಿ ಎಂಬ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸಿಂಗ್ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹಾಗಾಗಿ ಮೆದುಳು ರಕ್ತಸ್ರಾವದಿಂದ ಸಾವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಅಯೋಧ್ಯೆ ವಿಭಾಗೀಯ ಆಯುಕ್ತ ಗೌರವ್ ದಯಾಳ್, ಡಿಎಂ ಚಂದ್ರ ವಿಜಯ್ ಸಿಂಗ್, ಸಂಸದ ಅವಧೇಶ್ ಪ್ರಸಾದ್, ಮೇಯರ್ ಗಿರೀಶ್ಪತಿ ತ್ರಿಪಾಠಿ, ಅಯೋಧ್ಯೆ ಎಸ್ಪಿ ಮತ್ತು ಇತರ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಡಿಎಂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೆ ಘಟನೆ ಬಗ್ಗೆ ಕುಟುಂಬ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸಿಂಗ್ ಮೃತದೇಹ ಪತ್ತೆಯಾದ ಕೋಣೆಯ ಸುತ್ತ ನೆಲದ ಮೇಲೆ ರಕ್ತ ಕಂಡುಬಂದಿದೆ. ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವೂ ಆಗಮಿಸಿದೆ. ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Click

https://newsnotout.com/2024/10/storm-kannada-news-viral-news-5-84-lakh-people-d-replaced/
https://newsnotout.com/2024/10/lawyer-jagadeesh-kannada-news-viral-news-bigboss-house/
https://newsnotout.com/2024/10/traffic-police-kannada-news-viral-news-car-issue-viral-video-shivamogga/
https://newsnotout.com/2024/10/indian-army-attacked-by-kannada-news-viral-news-4-are-nomore/
https://newsnotout.com/2024/10/kannada-news-darshan-and-mobile-case-revealed-viral-nenws-hf/

Related posts

ಲಕ್ಷಗಟ್ಟಲೆ ದೇಣಿಗೆ ಹಣ ಕದ್ದು ರಶೀದಿ ಪುಸ್ತಕದ ಜೊತೆಗೆ ಇಸ್ಕಾನ್ ದೇವಸ್ಥಾನದ ಉದ್ಯೋಗಿ ಪರಾರಿ..! ದೂರು ದಾಖಲು

ರಾಜಭವನಕ್ಕೂ ಬಾಂಬ್ ಬೆದರಿಕೆ ಕರೆ ಮಾಡಿದ್ಯಾರು..? ಶಾಲೆಗಳ ಬೆದರಿಕೆ ಬೆನ್ನಲ್ಲೆ ಈ ನಿಗೂಢ ಕರೆ ಬಂದದ್ದೆಲ್ಲಿಂದ?

ಯುವತಿಯ ಕಾರು ಫಾಲೋ ಮಾಡಿ ಡೋರ್‌ ತೆಗೆಯಲು ಯತ್ನಿಸಿದ ಯುವಕರು..! ಆಳುತ್ತಲೇ ದೃಶ್ಯ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ ಯುವತಿ