ಕರಾವಳಿ

ಗುತ್ತಿಗಾರು: ಬಿರಿಯಾನಿ ಮಾರಾಟದ ಉಳಿತಾಯ ಹಣವನ್ನು ದಾನ ಕೊಟ್ಟ ವ್ಯಾಪಾರಿ..! ಹೊಸ ವರ್ಷವನ್ನು ವಿಭಿನ್ನವಾಗಿ ವೆಲ್ ಕಮ್ ಮಾಡಿದ ಅನಿಲಣ್ಣ

198

ನ್ಯೂಸ್ ನಾಟೌಟ್ : ಹೊಸ ವರ್ಷಕ್ಕೆ ದುಂದು ವೆಚ್ಚ ಮಾಡೋರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಾಪಾರಿ ಹೊಸ ವರ್ಷಕ್ಕೂ ಒಂದು ದಿನ ಮೊದಲು ತಮ್ಮ ಬಿರಿಯಾನಿ ವ್ಯಾಪಾರದ ಉಳಿತಾಯ ಹಣವನ್ನು ಸಮಾಜದ ಬಡವರ ಪರ ಕೆಲಸಕ್ಕೆ ವಿನಿಯೋಗಿಸಿ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಗುತ್ತಿಗಾರು ಶ್ರೀ ರಾಘವೇಂದ್ರ ಬೇಕರಿಯನ್ನು ಮುನ್ನಡೆಸಿಕೊಂಡು ಬರುತ್ತಿರುವ ಅನಿಲ್ ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡವರಾಗಿದ್ದಾರೆ. ಬೇಕರಿ ಮತ್ತು ಉಪಹಾರದ ಜೊತೆಗೆ ಜನರೊಂದಿಗೆ ಒಂದೊಳ್ಳೆಯ ಒಡನಾಟವನ್ನು ಹೊಂದಿರುವ ಅವರು ಸುಳ್ಯ ತಾಲೂಕಿನ ತಮ್ಮ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ವರ್ಷಂಪ್ರತಿ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸುವ ಅನಿಲ್ ಅವರು ಈ ಸಲವೂ ತಮ್ಮ ಸಮಾಜಮುಖಿ ಚಿಂತನೆಗಳಿಂದ ವರ್ಷಾರಂಭವನ್ನು ಮಾಡಿದ್ದಾರೆ. ಬಿರಿಯಾನಿ ಮಾರಾಟದ ಉಳಿತಾಯಗೊಂಡ ಹಣವನ್ನು ಈ ವರ್ಷ ಅವರು ಗುತ್ತಿಗಾರಿನ ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ ನ ಸೇವಾ ಯೋಜನೆಗೆ ಧನ ಸಹಾಯ ನೀಡುವ ಮೂಲಕ ಮಾದರಿಯಾಗಿದ್ದಾರೆ. ಉಳಿತಾಯ ಹಣವನ್ನು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಸದಸ್ಯರಾದ ನಿವೃತ್ತ ಸೈನಿಕ ಮಹೇಶ್ ಕೊಪ್ಪತಡ್ಕ, ಉದಯ ಕುಮಾರ್ ಹಾಲೆಮಜಲು, ಮೋಹನ್ ಮುಕ್ಕೂರ್, ಶಶಿಕುಮಾರ್ ಕೊರತ್ಯೆಡ್ಕ, ಜಗದೀಶ್ ಕಡಬ, ಸಂತೋಷ್ ಪಂಜ ಹಾಗೂ ಬೇಕರಿ ಸಿಬ್ಬಂದಿ ಉಪಸ್ಥಿತರಿದ್ದರು.

See also  ಸುಳ್ಯ: ಎನ್ನೆoಪಿಯುಸಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget