ನ್ಯೂಸ್ ನಾಟೌಟ್: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ) ಗುತ್ತಿಗಾರು ವತಿಯಿಂದ ದೇಶದ ಸೈನ್ಯದ ಯಶಸ್ಸಿಗೆ ಮತ್ತು ಸೇನಾ ಕಾರ್ಯಾಚರಣೆಯಲ್ಲಿ ಬಲಿದಾನ ಮಾಡಿದ ಸೈನಿಕರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಈ ವೇಳೆ ಟ್ರಸ್ಟ್ ವತಿಯಿಂದ ನಡೆಸಲಪ್ಪಡುವ ಕರಾಟೆ ತರಬೇತಿ ಕಾರ್ಯಾಗಾರವನ್ನು ಗುತ್ತಿಗಾರಿನ ಪರಿಷಿಷ್ಟ ವರ್ಗದ ಸಭಾ ಭವನದಲ್ಲಿ ಉದ್ಘಾಟಿಸಲಾಯಿತು. ಮೀನಾಕ್ಷಿ ಉಮೇಶ್ ಮುಂಡೋಡಿ, ಗ್ರಾಮ ಪಂಚಾಯತ್ ಗುತ್ತಿಗಾರಿನ ಅಭಿವೃದ್ಧಿ ಅಧಿಕಾರಿ ಧನಪತಿ, ಪ್ರೀತಿ ನಿಶ್ಚಿತ್ ದೇವಶ್ಯ ಇವರೆಲ್ಲ ಜೊತೆಯಾಗಿ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಸಿ ಶುಭಾಶಯ ಕೋರಿದರು.
ಈ ವೇಳೆ ಚೆಸ್ ತರಬೇತಿಯ ಸಮಾರೋಪ ಸಮಾರಂಭ ಮತ್ತು ಚೆಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು. ಮೇ 20ರ ವರೆಗೆ ಕರಾಟೆ ತರಬೇತಿ ನಡೆಯಲಿದ್ದು, ಮುಂದೆ ಪ್ರತಿವಾರ ಕರಾಟೆ ತರಬೇತಿ ಮುಂದುವರಿಯಲಿದೆ. ಗ್ರಾಮೀಣ ಪ್ರದೇಶದ ಮಕ್ಕಳ ಸದೃಢತೆ ಎಂಬ ಧ್ಯೇಯದೊಂದಿಗೆ ಈ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ,ಮೋಹನ್ ಮುಕ್ಕೂರ್, ದಿವ್ಯಾ ಸುಜನ್ ಗುಡ್ಡೆಮನೆ, ಸುಕೇಶ್ ಚಾರ್ಮಾತ, ಅಭಿಲಾಶಾ ಶಿವಪ್ರಕಾಶ್, ಕರಾಟೆ ಶಿಕ್ಷಕ ನಾರಾಯಣ ಮಳಿ, ಚೆಸ್ ಶಿಕ್ಷಕ ರಮೇಶ್ ಕರಂಗಲಡ್ಕ ಮತ್ತು ಪೋಷಕರು ಉಪಸ್ಥಿತರಿದ್ದರು.
ಆಕಸ್ಮಿಕವಾಗಿ ಗಡಿ ದಾಟಿ ಪಾಕ್ ನಿಂದ ಬಂಧಿಸಲ್ಪಟ್ಟಿದ್ದ ಯೋಧ ಭಾರತಕ್ಕೆ ವಾಪಸ್..! ಭಾರತಕ್ಕೆ ರಾಜತಾಂತ್ರಿಕ ಗೆಲುವು..!