ಗುತ್ತಿಗಾರು: ಕಳ್ಳರು ಹೇಗೆ ಬೇಕಾದರೂ ಯಾವ ರೀತಿಯಲ್ಲಾದರೂ ತಮ್ಮ ಕೈ ಚಳಕ ತೋರಬಲ್ಲರು ಎನ್ನುವುದಕ್ಕೆ ಇಲ್ಲೊಂದು ಪ್ರತ್ಯಕ್ಷ ಉದಾಹರಣೆಯನ್ನು ನೋಡಬಹುದಾಗಿದೆ. ಹೌದು, ಡಿಸೆಂಬರ್ 22 ರಂದು ಹೊಗೆ ಗೂಡಿನಲ್ಲಿ ಹಾಕಿದ ರಬ್ಬರ್ ಶೀಟ್ ಅನ್ನೇ ಕಳ್ಳರು ಎಗರಿಸಿರುವ ಘಟನೆ ನಡೆದಿದೆ.
ಏನಿದು ಘಟನೆ?
ಮೊಗ್ರದ ವಿಜಯ ಕುಮಾರ್ ಎಂಬವರು ಗೊರ್ಗೋಡಿಯ ಎ ಎನ್ ಗೋಪಾಲ ಎಂಬವರಿಂದ ರಬ್ಬರ್ ತೋಟವನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡು ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದರು. ಟ್ಯಾಪಿಂಗ್ ಮುಗಿಸಿ ಶೀಟ್ ಅನ್ನು ಹೊಗೆ ಗೂಡಿನಲ್ಲಿ ಹಾಕಿ ಬಂದಿದ್ದರು. ಸಂಜೆ ವೇಳೆ ಮತ್ತೆ ಹೋದಾಗ ಗೂಡಿನ ಬೀಗ ಮುರಿದು ಸುಮಾರು 150 ಕ್ಕೂ ಅಧಿಕ ರಬ್ಬರ್ ಶೀಟುಗಳು ಕಳವಾಗಿರುವುದು ಪತ್ತೆಯಾಗಿದೆ. ಈ ಬಗ್ಗೆ ವಿಜಯಕುಮಾರ್ ಅವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು ಸುಬ್ರಹ್ಮಣ್ಯದ ಠಾಣಾಧಿಕಾರಿ ಜಂಬೂರಾಜ್ ಮಹಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.