ಸುಳ್ಯ: ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ 4 ನೇ ವರ್ಷದ ಪ್ರತಿಷ್ಠಾವಾರ್ಷಿಕ ಮಹೋತ್ಸವು ಇಂದಿನಿಂದ ಆರಂಭವಾಗಿದೆ. ನಾಳೆಯೂ ಧಾರ್ಮಿಕ ಕಾರ್ಯಗಳು ಮುಂದುವರಿಯಲಿವೆ. ಇಂದು ಬೆಳಗ್ಗೆ7 ಕ್ಕೆ ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿದೆ. ಮಧ್ಯಾಹ್ನ ಗಂಟೆ 2 ರಿಂದ ಹರಿಕಥಾ ಕಾಲಕ್ಷೇಪ ನಡೆಯಲಿದೆ. ಸಂಜೆ 5ರಿಂದ ಪಲ್ಲಕಿಯಲ್ಲಿ ರಾಯರ ಪಟ್ಟಣ ಸವಾರಿ ಸುಳ್ಯನಗರದಲ್ಲಿ ನಡೆಯಲಿದೆ. ಚೆಂಡೆ, ಡೋಲು, ವಾದ್ಯ,ಆಕರ್ಷಕ ಭಜನೆ, ಕುಣಿತ ಭಜನೆ, ಭಕ್ತಸಮೂಹದೊಂದಿಗೆ ರಾಯರು ಪಲ್ಲಕ್ಕಿಯಲ್ಲಿ ಸುಳ್ಯ ನಗರದಲ್ಲಿ ಸಾಗಿ ಬರುವುದು ಕಾರ್ಯಕ್ರಮದ ವಿಶೇಷ.
ನಾಳೆ ಬೆಳಗ್ಗೆ 9 ರಿಂದ ಪಂಚ ವಿಂಶತಿ ಕಲಶ ಪೂಜೆ, ಕಲಶಾಭಿಷೇಕ, ರಾಘವೇಂದ್ರ ಅಷ್ಟಾಕ್ಷರಿ ಮಂತ್ರ ಹೋಮ, ಶ್ರೀರಾಮ ತಾರಕ ಮಂತ್ರ ನಡೆಯಲಿದೆ. ಪೂ.10ರಿಂದ ಹರಿಕಥಾ ಕಾಲಕ್ಷೇಪ, ಮಧ್ಯಾಹ್ನ 12ಕ್ಕೆ ಅಲಂಕಾರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ತಾಲೂಕು ಮಟ್ಟದ ಯಕ್ಷಗಾನ ಬಯಲಾಟ ಸ್ಪರ್ಧೆ ಯಕ್ಷ ಕಾರಂಜಿ ನಡೆಯಲಿದೆ. ಸಂಜೆ 5 ರಿಂದ ಆಶ್ಲೇಷಾ ಬಲಿ ಪೂಜೆ, ರಾತ್ರಿ ರಂಗಪೂಜೆ, ಮಹಾಪೂಜೆ, ಅನ್ನ ಸಂತರ್ಪಣೆ, ಧಾರ್ಮಿಕ ಸಭಾ ಕಾರ್ಯಕ್ರಮ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎನ್. ಶ್ರೀಕೃಷ್ಣಸೋ ಮಯಾಗಿ ತಿಳಿಸಿದ್ದಾರೆ.