ಕ್ರೈಂವೈರಲ್ ನ್ಯೂಸ್ಸಿನಿಮಾ

ನಿರ್ದೇಶಕ ಗುರುಪ್ರಸಾದ್ ಮನೆಗೆ ಹೋದಾಗ ದಿಗ್ಭ್ರಾಂತಿಗೊಂಡಿದ್ದೆ ಎಂದದ್ದೇಕೆ ನಟ ಜಗ್ಗೇಶ್..? ರಂಗನಾಯಕ ಸಿನಿಮಾವನ್ನು ಅತ್ಯಂತ ಕೆಟ್ಟದಾಗಿ ಮಾಡಿದ್ರು, ನನಗೆ ನೋವಾಗಿತ್ತು ಎಂದ ಜಗ್ಗೇಶ್..!

80
Spread the love

ನ್ಯೂಸ್ ನಾಟೌಟ್ : ನಿರ್ದೇಶಕ ಗುರುಪ್ರಸಾದ್ ಸಾವಿನ ಬಗ್ಗೆ ನಟ, ಸಂಸದ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದು, ಗುರುಪ್ರಸಾದ್ ಜೊತೆಗಿನ ಹಲವು ಅನುಭವಗಳನ್ನು ಹೇಳಿಕೊಂಡಿದ್ದಾರೆ. “ಗುರುಪ್ರಸಾದ್ ನಮ್ಮ ಮನೆಯಲ್ಲಿ ಬೆಳೆದ ಹುಡುಗ. ನಾವು ಯಾವುದೋ ಕಾರಣಕ್ಕೆ ದೂರವಾಗಿದ್ದ ಕಾರಣ ಹೆಚ್ಚು ಮಾತನಾಡುತ್ತಿರಲಿಲ್ಲ. ನಮ್ಮ ಕೆಲವು ಗೆಳೆಯರು ಮತ್ತೆ ನೀವು ಒಂದಾಗಬೇಕು ಎಂದು ಪ್ರಯತ್ನಿಸಿದ್ದರು ಎಂದಿದ್ದಾರೆ.

‘ನಾನು ಮಧ್ಯಾಹ್ನ 2 ಗಂಟೆಗೆ ಬಂದರೆ ಗುರುಪ್ರಸಾದ್ 4 ಗಂಟೆಗೆ ಬರ್ತಿದ್ರು. ಅವರ ಹತ್ತಿರ ಕುಡಿತದ ವಾಸನೆ ಬೇರೆ ಬರ್ತಿತ್ತು. ನಾನು ನನ್ನ ಪಾಡಿಗೆ ನನ್ನ ಕೆಲಸ ಮಾತ್ರ ಮಾಡಿ ಬರ್ತಿದ್ದೆ.” ಯಾಕಪ್ಪಾ ಗುರುಪ್ರಸಾದ್..ಯಾಕೆ ಹೀಗಾದೆ..ನಿರ್ಮಾಪಕರು ಕೊಟ್ಟ ದುಡ್ಡಲ್ಲಿ ನೀನು ಸೆಟಲ್ ಆಗಬಹುದಲ್ವಾ?” ಎಂದು ಬುದ್ದಿಮಾತು ಹೇಳಿದ್ದೆ. ಆದರೆ ಆತ ಬದಲಾಗಿರಲಿಲ್ಲ ಎಂದು ನಟ ಜಗ್ಗೇಶ್ ತಿಳಿಸಿದ್ದಾರೆ.

ಇದೇ ವೇಳೆ ಗುರುಪ್ರಸಾದ್ ನನ್ನನ್ನು ಅವರ ಮನೆಗೆ ಸಹ ಕರೆದಿದ್ದರು. ಅವರ ಮನೆಗೆ ಹೋದಾಗ ದಿಗ್ಭ್ರಾಂತಿಗೊಂಡಿದ್ದೆ. ಮನೆಯಲ್ಲಿ ಇರೋ ಜಾಗದಲ್ಲೆಲ್ಲ ಮದ್ಯದ ಬಾಟಲಿಗಳೇ ತುಂಬಿದ್ದವು. ಕುಡಿತದ ಗುಣ ಗುರುಪ್ರಸಾದ್ ಬದುಕನ್ನೇ ಹಾಳುಮಾಡಿತು. ಅವರು ಸಾಮಾನ್ಯ ಮನುಷ್ಯನಲ್ಲ, ಒಳ್ಳೆ ಯೋಚನೆ ಹೊಂದಿರುವ ಬರವಣಿಗೆಯ ತಾಕತ್ತು ಹೊಂದಿರುವ ಮನುಷ್ಯ. ದುಶ್ಚಟಗಳು ಗುರುಪ್ರಸಾದ್ ಜೀವನವನ್ನು ಹಾಳುಮಾಡಿತು. ಅವರ ಜೊತೆ ನಾನು ಮಾಡಿದ್ದ ರಂಗನಾಯಕ ಸಿನಿಮಾವನ್ನು ಅತ್ಯಂತ ಕೆಟ್ಟದಾಗಿ ಮಾಡಿದ್ರು. ಅದರಿಂದ ನನಗೆ ನೋವಾಗಿತ್ತು ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

ಸುಮಾರು ಸಾವಿರ ಬಾರಿ ಸಾಯುವ ಮಾತನಾಡಿದ್ದರು. ಗುರುಪ್ರಸಾದ್ ಮೊದಲ ಹೆಂಡತಿ ಎದ್ದೇಳು ಮಂಜುನಾಥ್ ಸಿನಿಮಾಗೆ ಕೆಲಸ ಮಾಡಿದ್ದರು. ಮುಂದೆ ಗಂಡ ಹೆಂಡತಿ ನಡುವೆ ವಿರಸ ಬಂದಾಗ ಬುದ್ದಿಮಾತನ್ನು ಹೇಳಿದ್ದೆ. ಆದರೆ ಅದನ್ನೆಲ್ಲ ಕೇಳಲಿಲ್ಲ.
ಗುರುಪ್ರಸಾದ್ ಅಂದ್ರೆ ಬರುವಾಗ ಪುಸ್ತಕ ಹಿಡಿದುಕೊಂಡು ಬರುತ್ತಿದ್ದ. ಆದರೆ ಇತ್ತೀಚಿಗೆ ಮದ್ಯದ ಬಾಟಲ್ ಹಿಡಿದು ಬರುವಂತಾಗಿದ್ದ. ಗುರುಪ್ರಸಾದ್ ಜೊತೆಗಿದ್ದ ಎಲ್ಲ ಪ್ರಜ್ಞಾವಂತರು ಅವರನ್ನು ಬಿಟ್ಟುಹೋಗಿದ್ದರು. ಅದಕ್ಕೆಲ್ಲ ಕಾರಣ ಗುರುಪ್ರಸಾದ್ ಅವರ ಸಿಟ್ಟು ಮತ್ತು ಈಗೋ ಮಾತ್ರವಾಗಿತ್ತು. ಎಲ್ಲರನ್ನೂ ಅಣಕಿಸುವ ಸ್ವಭಾವ ಅವರದ್ದಾಗಿತ್ತು ಎಂದಿದ್ದಾರೆ. ಅವರು ದೇವರ ಬಗ್ಗೆಯೂ ಟೀಕಿಸುತ್ತಿದ್ದರು, ಇದು ನನಗೆ ಆಗುತ್ತಿರಲಿಲ್ಲ ನಾನು ತುಂಬಾ ಸಲ ಬುದ್ದಿ ಹೇಳಿದ್ದೆ ಎಂದಿದ್ದಾರೆ.

Click

https://newsnotout.com/2024/11/hijab-issue-iran-kannada-news-viral-video-police-arrested-girl/
https://newsnotout.com/2024/11/director-mata-guruprasad-nomore-kannada-news-bengaluru/
https://newsnotout.com/2024/11/hasanamba-kannada-news-9-crore-rupees-collected-dj/
https://newsnotout.com/2024/11/andra-pradesh-kannada-news-chandra-babu-naidu-video/
https://newsnotout.com/2024/11/udupi-kaupu-collision-kannada-news-mini-bus-and-lorry-s/
See also  ಬಂಧನದ ವೇಳೆ ಪೊಲೀಸ್ ಸಿಬ್ಬಂದಿಗೆ ಚಾಕುವಿನಿಂದ ಇರಿದ ಆರೋಪಿ..! ಕೊಲೆ ಆರೋಪಿಯ ಎರಡೂ ಕಾಲಿಗೆ ಗುಂಡೇಟು..!
  Ad Widget   Ad Widget   Ad Widget   Ad Widget   Ad Widget   Ad Widget