ಕ್ರೈಂವೈರಲ್ ನ್ಯೂಸ್ಸಿನಿಮಾ

ಗುರುಪ್ರಸಾದ್‌‌‌ ಬಗ್ಗೆ ಕೀಳಾಗಿ ಮಾತನಾಡಿದ ಜಗ್ಗೇಶ್ ಗೆ ನೆಟ್ಟಿಗರ ತರಾಟೆ..! ತನ್ನನ್ನು ಟೀಕಿಸಿದವರನ್ನು ‘ಶ್ವಾನಗಳು ಬೊಗಳುತ್ತವೆ’ ಎಂದು ಟೀಕಿಸಿದ ನಟ ಜಗ್ಗೇಶ್‌..!

227

ನ್ಯೂಸ್ ನಾಟೌಟ್: ನಿರ್ದೇಶಕ ಗುರುಪ್ರಸಾದ್‌ (Guruprasad) ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿತ್ತು. ಗುರುಪ್ರಸಾದ್ ನಿಧನ ಸುದ್ದಿ ಹೊರಬೀಳುತ್ತಿದ್ದಂತೆ ನಟ ಜಗ್ಗೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಆದರೆ ಜಗ್ಗೇಶ್‌ ಕೆಲ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಹಲವು ನಟರು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಇದರ ಬೆನ್ನಲ್ಲೇ ಇದೀಗ ಜಗ್ಗೇಶ್‌ ಟ್ವೀಟ್‌‌ ಮಾಡಿದ್ದು, ತಮ್ಮ ಮೇಲೆ ಕಿಡಿಕಾರದವರಿಗೆ ಪೋಸ್ಟ್‌ ಮೂಲಕ ತಿರುಗೇಟು ಕೊಟ್ಟಿದ್ದಾರೆ.
“ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತದೆ. ಅದಕ್ಕೆ Scientific ಕಾರಣ “ಭಯ”. ಎರಡನೆಯದು ಏನು ನಾವು ನೆಲದಷ್ಟೆ ಹೀಗಿದ್ದೇವೆ. ಆನೆ ಮಾತ್ರ ಮುಗಿಲೆತ್ತರ ಬೆಳದಿದೆ ಎಂಬ ಸಂಕಟ. ತಾತ್ಪಾರ್ಯ: ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನವು ಅವುಗಳ ಕೆಲಸ ಮಾಡದೆ ಬೇರೆ ವಿಧಿಯಿಲ್ಲಾ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು” ಎಂದು ಬರೆದುಕೊಂಡಿದ್ದಾರೆ.

ಈ ಬರಹದ ಬಗ್ಗೆ ಹಲವರು ಬೇಸರ ಹೊರ ಹಾಕಿದ್ದು, ಹಿಂದಿನ ಹೇಳಿಕೆಗಳನ್ನು ಸಮರ್ಥಿಸಿಕೊಂಡು ಅಗಲಿದವರ ಬಗ್ಗೆ ಹಾಗೆ ಮಾತನಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Click

https://newsnotout.com/2024/11/himachal-artist-kannada-news-chicken-cut-in-stage-d-fir/
https://newsnotout.com/2024/11/railway-station-kanpura-kannada-news-food/
https://newsnotout.com/2024/11/water-metro-like-kocchi-kannada-news-at-mangaluru/
https://newsnotout.com/2024/11/court-kannada-news-yash-and-radhika-pandith/
https://newsnotout.com/2024/11/kannada-news-viral-video-uncle-madya-pradesh/
https://newsnotout.com/2024/11/kannada-news-viral-video-modi-modi-siddaramayya-d/
See also  ಸಂಪಾಜೆ: ಕೆ ಎಸ್ ಆರ್ ಟಿ ಸಿ ಬಸ್ ಅಪಘಾತ, ಎಲ್ಲರೂ ಪ್ರಾಣಾಪಾಯದಿಂದ ಪಾರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget