ಕ್ರೈಂಸುಳ್ಯ

ಗೂನಡ್ಕ: ಮುಚ್ಚಿದಷ್ಟು ಮತ್ತೆ..ಮತ್ತೆ ಜರಿಯುತ್ತಿರುವ ನಿಗೂಢ ಗುಂಡಿ, ಸ್ಥಳೀಯರಲ್ಲಿ ಮತ್ತೆ ಹೆಚ್ಚಿದ ಆತಂಕ..! ಪ್ರಾಚೀನ ಕಾಲದ ಸುರಂಗ ಇರುವುದು ನಿಜವೇ..?

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಗೂನಡ್ಕದ ಸಮೀಪದಲ್ಲಿರುವ ದೊಡ್ಡಡ್ಕ ಬಳಿಯ ಮನಯೊಂದರ ಪಕ್ಕದಲ್ಲಿ ಬಾಯ್ತೆರೆದ ನಿಗೂಢ ಗುಂಡಿಯನ್ನು ಮುಚ್ಚಿದ ಬೆನ್ನಲ್ಲೇ ಇದೀಗ ಮತ್ತೆ ಆ ಗುಂಡಿ ಬಾಯ್ತೆರೆದು ಕೊಂಡಿದೆ.

ಮಂಗಳವಾರ ಬೆಳಗ್ಗೆ ದೊಡ್ಕದ ರಾಜಾರಾಂಪುರ ನಿವಾಸಿ ಬಾಳಪ್ಪ ಅನ್ನುವವರ ಮನೆಯ ಪಕ್ಕದಲ್ಲಿ ನಿಗೂಢ ರೀತಿಯಲ್ಲಿ ಗುಂಡಿಯೊಂದು ಬಾಯ್ತೆರೆದುಕೊಂಡಿತ್ತು. ಇದು ಮನೆಯವರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಸ್ಥಳಕ್ಕೆ ಕಂದಾಯ ಇಲಾಖೆ, ಇಂಜಿನೀಯರ್ ಹಾಗೂ ಸ್ಥಳೀಯ ಆಡಳಿತಾಧಿಕಾರಿಗಳು ಆಗಮಿಸಿದ್ದರು. ಕೊನೆಗೆ ಗುಂಡಿಯನ್ನು ಜೆಸಿಬಿ ಯಂತ್ರದ ಮೂಲಕ ಬುಧವಾರ (ಜು.16) ಮುಚ್ಚಿಸಲಾಯಿತು.

ಆದರೆ ಈ ಗುಂಡಿ ಇದೀಗ ಮತ್ತೆ ಗುಂಡಿ ತೆರೆದುಕೊಂಡಿದೆ. ಸ್ಥಳೀಯರು ಹೇಳುವ ಪ್ರಕಾರ ಕೆಳಗೆ ಹಿಂದಿನ ಕಾಲದ ಸುರಂಗ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಕುಸಿಯುತ್ತಿದೆ ಎನ್ನುತ್ತಿದ್ದಾರೆ. ಸ್ಥಳಕ್ಕೆ ಭೂ ವಿಜ್ಞಾನ ಇಲಾಖೆಯವರನ್ನು ಕರೆಸಿದರೆ ಜನರ ಅನುಮಾನ ಪರಿಹಾರಗೊಳ್ಳಬಹುದಾಗಿದೆ.

Related posts

ಕಡಬದಿಂದ ಅಕ್ರಮವಾಗಿ ದನ ಸಾಗಾಟ, ಸುಳ್ಯದಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿದ ಕಾರ್ಯಕರ್ತರು

ಸುಳ್ಯ:ಅಂದು ಕಸ ತುಂಬಿದ್ದ ಶೆಡ್‌ನಲ್ಲಿ ಇಂದು ಕಳೆಗಟ್ಟಿದ ಸಂಭ್ರಮ..!,ಕಲರ್ ಕಲರ್ ವಸ್ತ್ರಗಳಲ್ಲಿ ಮಿಂಚಿದ ಪೌರಕಾರ್ಮಿಕರು..!ಕಾರ್ಯಕ್ರಮ ಹೇಗಿತ್ತು?ವಿಶೇಷತೆಗಳೇನು?

ದೇವರಿಗೆ ಕೈಮುಗಿದು ಮೂರ್ತಿಯ ಮೇಲಿದ್ದ ಬೆಳ್ಳಿ ಕಿರೀಟ ಎಗರಿಸಿದ ಯುವಕ..! ಇಲ್ಲಿದೆ ವೈರಲ್ ವಿಡಿಯೋ