ನ್ಯೂಸ್ ನಾಟೌಟ್: ಈ ಸಲದ ಐಪಿಎಲ್ 2025 ಟಿ20 ಕೂಟದಲ್ಲಿ ಕಿಂಗ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿರುವುದು ನಮಗೆಲ್ಲರಿಗೂ ಗೊತ್ತೇ ಇದೆ. ಅಂತೆಯೇ ಸುಳ್ಯ, ಪುತ್ತೂರು, ಕಾಸರಗೋಡು, ಕಣ್ಣೂರು ಇಲ್ಲಿನ ಯುವಕರ ಒಳಗೊಂಡ ಐಪಿಎಲ್ ಚುಟುಕು ಕ್ರಿಕೆಟ್ ಗೇಮ್ ಪ್ರೆಡಿಕ್ಟ್ ಕೂಡ ನಡೆದು ಇದೀಗ ಅತೀ ಹೆಚ್ಚು ಪಾಯಿಂಟ್ ಪಡೆದ ರಶೀದ್ ದೊಡ್ಡಡ್ಕ ನಾಯಕತ್ವದ ಸೌದಿ ಲೆಜೆಂಡ್ಸ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ಏನಿದು ಗೇಮ್..?
ಟೀಮ್ ಅಡ್ಮಿನ್ ಐಪಿಎಲ್ ಪ್ರೆಡಿಕ್ಷನ್ 2025 ಕೂಟದ ಹೆಸರು. ಡ್ರೀಮ್ ಇಲೆವೆನ್ ಮಾದರಿಯನ್ನು ಹೋಲುವ ಲೆಕ್ಕಾಚಾರ ಇಲ್ಲಿ ಸ್ವಲ್ಪ ಅನ್ವಯಗೊಂಡಿದೆ. ಸುಮಾರು 10 ತಂಡಗಳನ್ನು ರಚಿಸಿಕೊಳ್ಳಲಾಗಿತ್ತು. ಪ್ರೆಡಿಕ್ಷನ್ ನಿಖರವಾಗಿ ಹೇಳಿದ ತಂಡಕ್ಕೆ ಇಂತಿಷ್ಟು ಅಂಕ ನಿಗದಿ ಮಾಡಲಾಗಿತ್ತು. ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ತೋರಿದ ಪ್ರೆಡಿಕ್ಷನ್ಸ್ ಪ್ಲೇಯರಿಗೂ ವಿಶೇಷ ಬಹುಮಾನ ನೀಡಲಾಯಿತು.
ತಂಡದ ವಿಭಾಗದಲ್ಲಿ ಮುಸ್ತಫಾ ಪಾಂಡಿ ಮಾಲಕತ್ವದ ರಶೀದ್ ದೊಡ್ಡಡ್ಕ ನಾಯಕತ್ವದ ಸೌದಿ ಲೆಜೆಂಡ್ಸ್ ಪ್ರಥಮ, ಫೈಝಲ್ ಕಟ್ಟೆಕಾರ್ಸ್ ಮಾಲೀಕತ್ವದ ಉಬೈ ಬೇಬಿಝೋನ್ ನಾಯಕತ್ವದ ಕಿಂಗ್ಸ್ ಕಟ್ಟಕಾರ್ಸ್ ದ್ವಿತೀಯ
ಸಿರಾಜ್ ಗೂನಡ್ಕ ಮಾಲೀಕತ್ವದ ಅಜ್ಮಲ್ ಗೂನಡ್ಕ ನಾಯಕತ್ವದ ರಾಯಲ್ ಚಾಲೆಂಜರ್ಸ್ ತೃತೀಯ, ಸಿನಾನ್( ಚಿನ್ನು) ಮಾಲೀಕತ್ವದ ರಶೀದ್ ಅಡಿಮಾರಡ್ಕ ನಾಯಕತ್ವದ ಡೇರ್ ಡೆವಿಲ್ಸ್ ಅಬುಧಾಬಿ ನಾಲ್ಕನೇ ಸ್ಥಾನ ಪಡೆಯಿತು
ವ್ಯಯುಕ್ತಿಕ ವಿಭಾಗದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಮಿಕ್ದಾದ್ ಒಮಾನ್ ಪ್ರಥಮ ಬಹುಮಾನ ರೂ 5000 ಮತ್ತು ಟ್ರೋಫಿ, ಸೌದಿ ಲೆಜೆಂಡ್ ತಂಡದ ಝಹೀರ್ ಪೆರಾಜೆ ದ್ವಿತೀಯ ಬಹುಮಾನ ರೂ. 3000 ಮತ್ತು ಟ್ರೋಫಿ, ಶಫೀಕ್ ಕುಂಬಕ್ಕೊಡ್ ತೃತೀಯ ರೂ. 2000 ಮತ್ತು ಟ್ರೋಫಿ,ಬಾತಿಷಾ ಬಿಳಿಯಾರು ಚತುರ್ಥ ಬಹುಮಾನ ರೂ 1000 ಮತ್ತು ಟ್ರೋಪಿ ಪಡೆದುಕೊಂಡರು. ಫೇರ್ ಪ್ಲೇ ಅವಾರ್ಡ್ ಪ್ರಶಸ್ತಿಯನ್ನು ಕಿಂಗ್ಸ್ ಕಟ್ಟೆಕ್ಕಾರ್ ಪಡೆದುಕೊಂಡರೆ, ಎಮರ್ಜಿಂಗ್ ಪ್ಲೆಯರ್ ಪ್ರಶಸ್ತಿಯನ್ನು ರಾಯಲ್ ಚಾಲೆಂಜರ್ಸ್ ಆಟಗಾರ ಅಜ್ಮಲ್ ಸಿನಾನ್ ಪಡೆದುಕೊಂಡರು. ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ.ಶಹೀದ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಿ.ಕೆ.ಹಮೀದ್, ಪಿ.ಕೆ. ಅಬೂಸಾಲಿ , ಉಬೈಸ್ ಗೂನಡ್ಕ, ಸಾಮಾಜಿಕ ಕಾರ್ಯಕರ್ತರಾದ ರಹೀಂ ಬೀಜದಕಟ್ಟೆ ಮತ್ತು ಫಾರೂಖ್ ಕಾನಕ್ಕೋಡ್, ಉದ್ಯಮಿ ಪೈಝಲ್ ಕಟ್ಟೆಕ್ಕಾರ್, ಅತಾವುಲ್ಲಾ ಕೆ.ಎಂ. ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು. ಅಡ್ಮಿನ್ ಐಪಿಎಲ್ ಪ್ರೆಡಿಕ್ಷನ್ 2025 ರ ವ್ಯವಸ್ಥಾಪಕರಾಗಿ, ಬದ್ರುದ್ದಿನ್ ಗೂನಡ್ಕ, ಮುಸ್ತಫಾ ಪಾಂಡಿ, ಸಿರಾಜುದ್ದಿನ್ , ಅಝರ್ ಚೇರೂರ್ ಹಾಗೂ ಅಯ್ಯುಬ್ ಚೆರೂರ್ ಕಾರ್ಯನಿರ್ವಹಿಸಿದರು.