ಕ್ರೈಂ

ಗುಳಿಗ ಕಟ್ಟೆಮುಂದೆ ಚಪ್ಪಲಿ ಧರಿಸಿ ತ್ರಿಶೂಲ ಹಿಡಿದು ನಿಂತ ಫೋಟೋ ಪ್ರಕಟಿಸಿದ ಯುವಕ..!

ಮಂಗಳೂರು: ಗುಳಿಗ ಕಟ್ಟೆ ಮುಂದೆ ಚಪ್ಪಲಿ ಧರಿಸಿ ತ್ರಿಶೂಲ ಹಿಡಿದು ನಿಂತ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಯುವಕನನ್ನು ಮಂಗಳೂರಿನ ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಸೈಗೋಳಿಯ ಸಲೂನ್ ಒಂದರಲ್ಲಿ ಕ್ಷೌರಿಕನಾಗಿರುವ ಉತ್ತರ ಭಾರತ ಮೂಲದ ಯುವಕ ಎಂದು ಗುರುತಿಸಲಾಗಿದೆ. ಈತ ಕಟ್ಟೆಯ ಎದುರು ನಿಂತು ಚಪ್ಪಲಿ ಧರಿಸಿ ದೈವದ ತ್ರಿಶೂಲ ಹಿಡಿದು ನಿಂತು ಫೋಟೊ ತೆಗೆಸಿಕೊಂಡಿದ್ದು ತನ್ನ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿದ್ದನೆನ್ನಲಾಗಿದೆ. ಸ್ಟೇಟಸ್ ಫೋಟೊ ವೈರಲ್ ಆಗಿದ್ದು  ಆತ ದೈವಕ್ಕೆ ಅಪಚಾರವೆಸಗಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ.  ಈ ನಡುವೆ ಕೆಲವು ಸ್ಥಳೀಯ ಯುವಕರು ತಾವು ಹಿಂದು ಸಂಘಟನೆಯವರೆಂದು ಹೇಳಿ ದೈವ ನಿಂದನೆಯ ಸ್ಟೇಟಸ್ ಮುಂದಿಟ್ಟು  ಕ್ಷೌರಿಕ ಆಯಾನ್ ನನ್ನ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನುವ ಮಾಹಿತಿಗಳಿದ್ದು,ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Related posts

ಸುಳ್ಯ ಪೊಲೀಸ್ ಠಾಣೆ ಮುಂಭಾಗದಲ್ಲಿ ಹಿಂದೂ ಕಾರ್ಯಕರ್ತರ ಬಂಧನ ವಿರೋಧಿಸಿ ಪ್ರತಿಭಟನೆ, ಕಲ್ಕುಡ ದೈವಸ್ಥಾನದಲ್ಲಿ ನ್ಯಾಯಕ್ಕಾಗಿ ಪ್ರಾರ್ಥನೆ

ವಿದ್ಯುತ್ ತಂತಿಗೆ ತಾಗುತ್ತಿವೆ ಎಂದು 400 ಬಾಳೆಗಿಡಗಳನ್ನು ಕಡಿದರೇ ಅಧಿಕಾರಿಗಳು? ಈ ಕೃತ್ಯ ನಡೆದದ್ದಾದರೂ ಎಲ್ಲಿ? ಈ ಬಗ್ಗೆ ಸಚಿವರು ಹೇಳಿದ್ದೇನು?

ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗು..! ಸ್ಥಳೀಯರು ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ರೋಚಕ ವಿಡಿಯೋ ಇಲ್ಲಿದೆ