ಭಕ್ತಿಭಾವ

ಗುಳಿಗ ದೈವದ ಪವಾಡ, ನುಡಿದಂತೆಯೇ ಕಂಡಿತು..!

694

ನ್ಯೂಸ್ ನಾಟೌಟ್ : ತುಳುನಾಡಿನ ಒಂದೊಂದು ದೈವಗಳಿಗೂ ಒಂದೊಂದು ಶಕ್ತಿ ಇದೆ ಅನ್ನುವುದು ಈ ಹಿಂದೆ ಸಾಕಷ್ಟು ಸಲ ಸಾಬೀತಾಗಿದೆ. ಇದೀಗ ಆ ಸಾಲಿಗೆ ಗುಳಿಗ ದೈವವೂ ಸೇರಿಕೊಂಡಿದೆ. ಗುಳಿಗ ದೈವವು ದರ್ಶನದಲ್ಲಿ ನುಡಿದ ಮಾತು ಅಕ್ಷರಶಃ ನಿಜವಾಗಿದ್ದು ಸತ್ಯದರ್ಶನಕ್ಕೆ ಸಾಕ್ಷಿಯಾಗಿದೆ.

ಚಾರ್ಮಾಡಿ ಘಾಟ್ ನ ಅಲೇಕಾಡು ಇತಿಹಾಸ ಪ್ರಸಿದ್ದ ಗುಳಿಗ ಕ್ಷೇತ್ರದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ನಡೆದಿದ್ದು ಈ ಸಂದರ್ಭದಲ್ಲಿ ನಡೆದ ಶ್ರೀ ಗುಳಿಗ ದೈವದ ದರ್ಶನದಲ್ಲಿ ಕ್ಷೇತ್ರದಿಂದ ೩-೪ ಕಿ.ಮಿ ದೂರದ ಅಲೆಕಾನ್ ಎಸ್ಟೇಟ್‌ನ ಮರವೊಂದರ ಕೆಳಗೆ ವಿಗ್ರಹ ಇದೆ ಎಂದು ತಿಳಿಸಿದ್ದರು. ಅದರಂತೆ ಗುಳಿಗ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು  ಮರವೊಂದರ ಕೆಳಗೆ ಅಗೆದು ನೋಡಿದಾಗ ಗುಳಿಗ ದೈವದ ಕಂಚಿನ ಮೂರ್ತಿ, ಕತ್ತಿ, ಗಂಟೆಗಳು ಮರದ ಕೆಳಗೆ ಪತ್ತೆಯಾಗಿದೆ. ಸದ್ಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಬಗ್ಗೆ ಮುಂದಿನ ದೈವ ದರ್ಶನದ ಹೇಳಿಕೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು  ಕ್ಷೇತ್ರದ ಜೀರ್ಣೋದ್ದಾರ ಸಮಿತಿ  ತಿಳಿಸಿದೆ.

See also  ಕಾರಣಿಕ ಕ್ಷೇತ್ರ ಪಲ್ಲತ್ತಡ್ಕ ಹೊಸಮ್ಮ ದೈವದ ನೇಮೋತ್ಸವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget