ಕ್ರೈಂ

ಗಾಂಧಿನಗರ:ಹಣ ಕೊಡಲು ನಿರಾಕರಿಸಿದ ಮಾವನ ಖಾಸಗಿ ಅಂಗವನ್ನೇ ಕತ್ತರಿಸಿದ ಸೊಸೆ..!,ವಿಚಾರಣೆ ವೇಳೆ ಆಕೆ ಹೇಳಿದ್ದೇನು?

ನ್ಯೂಸ್ ನಾಟೌಟ್ : ತಾನು ವಿದೇಶಕ್ಕೆ ಹೋಗಬೇಕೆಂದು ಬಹಳಷ್ಟು ಕನಸುಗಳನ್ನು ಹೊಂದಿದ್ದ ಮಹಿಳೆಯೊಬ್ಬಳು ೨ ಲಕ್ಷ ನೀಡಲು ನಿರಾಕರಿಸಿದ ಮಾವನ ಖಾಸಗಿ ಅಂಗವನ್ನೇ ಕತ್ತರಿಸಿ ಜೀವನವನ್ನೇ ಕತ್ತಲಾಗಿಸಿದ ಘಟನೆ ಗುಜರಾತ್‌ನ (Gujarat) ಖೇಡಾದಲ್ಲಿ ನಡೆದಿದೆ.

ಜಗದೀಶ್ ಶರ್ಮಾ (75) ಉಸಿರು ಚೆಲ್ಲಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆರೋಪಿ ಸೊಸೆಯನ್ನು ಪೊಲೀಸರು (Police) ಇದೀಗ ಬಂಧಿಸಿದ್ದಾರೆ. ಆಕೆ ವಿಚಾರಣೆ ವೇಳೆ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಪೊಲೀಸರ ತನಿಖೆ ವೇಳೆ ಆಕೆ ಸ್ಪೋಟಕ ಮಾಹಿತಿಯನ್ನು ನೀಡಿದ್ದು, ಆಕೆಯ ಮಾವ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಅನ್ನುವ ಸತ್ಯವನ್ನು ತೆರೆದಿಟ್ಟಿದ್ದಾಳೆ. ಇದಕ್ಕಾಗಿ ಹಣ ನೀಡುತ್ತಿದ್ದ ಎಂದು ಮಹಿಳೆ ಹೇಳಿದ್ದಾಳೆ.

ಸುಮಾರು ಮೂರು ದಿನಗಳಿಂದ ಜಗದೀಶ್ ಶರ್ಮಾ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಆತನ ಹಿರಿಯ ಮಗ ಹುಡುಕಾಟ ನಡೆಸಿದಾಗ ಶಾಶ್ವತವಾಗಿ ಕಣ್ಣು ಮುಚ್ಚಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ ಎಂದು ತಿಳಿದು ಬಂದಿದೆ. ಇದಾದ ಮೇಲೆ ದೇಹವನ್ನು ಪರೀಕ್ಷಿಸಿದ ವೇಳೆ ಖಾಸಗಿ ಅಂಗ ಕತ್ತರಿಸಿರುವುದು ಹಾಗೂ ತಲೆಗೆ ಬಲವಾಗಿ ಹೊಡೆದಿರುವುದು ಪತ್ತೆಯಾಗಿತ್ತು.

Related posts

14 ವರ್ಷದ ಬುಡಕಟ್ಟು ಹುಡುಗಿಯ ಮೇಲೆ ಸಂಬಂಧಿಕನಿಂದ ಅತ್ಯಾಚಾರ! ಕಾಡಿನಲ್ಲಿ ಸಿಕ್ಕ ಕಾರು ಪ್ರಕರಣಕ್ಕೆ ನೀಡಿತ್ತು ರೋಚಕ ತಿರುವು!

ನಮಾಜ್ ವೇಳೆ ಎಲ್ಲಾ ದೇವಸ್ಥಾನ-ಮಂದಿರಗಳ ಮೈಕ್ ಬಂದ್ ಆಗ್ಬೇಕು..! ಚರ್ಚೆಗೆ ಕಾರಣವಾದ ಬಾಂಗ್ಲಾ ಸರ್ಕಾರದ ಆದೇಶ..!

ಬಂಧನ ಭೀತಿಯಿಂದ ಕಾಡು ಸೇರಿದ ಗ್ರಾಮಸ್ಥರು..! ಅಧಿಕಾರಿಗಳು ಜನರನ್ನು ಮತ್ತೆ ಕರೆತಂದದ್ದೇಗೆ..? ಏನಿದು ಪ್ರಕರಣ..?