ವೈರಲ್ ನ್ಯೂಸ್

ಬಿಪರ್‌ಜಾಯ್ ಚಂಡಮಾರುತಕ್ಕೆ ಸಿಲುಕಿದ್ದ 4 ದಿನದ ಹಸುಗೂಸನ್ನು ರಕ್ಷಿಸಿದ ಮಹಿಳಾ ಪೊಲೀಸ್..! ವೈರಲ್ ವಿಡಿಯೋ ವೀಕ್ಷಿಸಿ

193

ನ್ಯೂಸ್ ನಾಟೌಟ್:  ಗುಜರಾತ್‌ನ ಕರಾವಳಿಯಲ್ಲಿ ಬಿಪರ್ ಜಾಯ್ ಚಂಡಮಾರುತ ಅಬ್ಬರಿಸುತ್ತಿದೆ. ಸಿಕ್ಕಿಸಿಕ್ಕಿದಲ್ಲೆಲ್ಲ ಹಾನಿಯುಂಟು ಮಾಡಿಕೊಂಡು ಮುನ್ನುಗ್ಗುತ್ತಿದೆ. ಸಹಸ್ರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ಭಾರೀ ಪ್ರಮಾಣದಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ, ಕಾರ್ಯಾಚರಣೆ ವೇಳೆಯ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನಾಲ್ಕು ದಿನಗಳ ಕಂದಮ್ಮನನ್ನು ತಮ್ಮ ತೋಳುಗಳಲ್ಲಿ ಸ್ಥಳಾಂತರಿಸುವ ವಿಡಿಯೋ ಫುಲ್ ವೈರಲ್ ಆಗಿದೆ. ದ್ವಾರಕಾ ಜಿಲ್ಲೆಯ ಭನ್ವಾಡ್ ಗ್ರಾಮದ ಕುಟುಂಬವನ್ನು ಸ್ಥಳಾಂತರಿಸಲಾಯಿತು. ಈ ವೇಳೆ ಕಂದಮ್ಮನ ವಿಡಿಯೋ ಭಾರೀ ಗಮನ ಸೆಳೆದಿದೆ. ಈ ಟ್ವೀಟ್‌ವನ್ನು ಗುಜರಾತ್ ಪೊಲೀಸ್ ಮಹಾ ನಿರ್ದೇಶಕರ ಅಧಿಕೃತ ಖಾತೆಯೂ ಕೂಡ ಶೇರ್ ಮಾಡಿದ್ದು ಅವರು ಸುರಕ್ಷಿತ ಕೈಗಳಲ್ಲಿದ್ದಾರೆಂದು ಶೀರ್ಷಿಕೆ ನೀಡಿರುವುದು ಗಮನ ಸೆಳೆದಿದೆ.

See also  ಸ್ಮಾರ್ಟ್ ವಾಚ್ ನಲ್ಲಿ ಡಿಜಿಟಲ್ UPI ಕ್ಯೂಆರ್ ಕೋಡ್ ಬಳಸುತ್ತಿರುವ ಆಟೋ ಚಾಲಕ..! ಫೋಟೋ ಎಲ್ಲೆಡೆ ವೈರಲ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget