ಕ್ರೈಂ

15 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ! ಮೌನವಾಗಿರಲು 10 ರೂ. ಕೊಟ್ಟು ಸಮಾಧಾನಿಸಿದ..! ಇಲ್ಲಿದೆ ಪೂರ್ಣ ಮಾಹಿತಿ

257

ನ್ಯೂಸ್‌ನಾಟೌಟ್‌: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಮಾರ್ಚ್ ೧೬ ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ 15 ವರ್ಷದ ಬಾಲಕಿಗೆ 10 ರೂಪಾಯಿ ನೀಡಿದ್ದು, ಅಪರಾಧದ ಬಗ್ಗೆ ಯಾರಿಗೂ ಹೇಳಬೇಡ ಎಂದು ಬೆದರಿಸಿರುವುದಾಗಿ ಎಂದು ಪೊಲೀಸರ ದೂರಿನಲ್ಲಿ ದಾಖಲಿಸಲಾಗಿದೆ.

“ಸಂಜೆ ಆಡುಗಳನ್ನು ಮೇಯಿಸುತ್ತಿದ್ದಾಗ ಆಕೆಯ ಅಜ್ಜ ಬಂದು ಆಕೆಯ ಜೊತೆಗಿದ್ದ ಅವಲ ಅಮ್ಮನನ್ನು ಮನೆಗೆ ಹೋಗುವಂತೆ ಹೇಳಿದರು, ಜೊತೆಗೆ ಈಕೆಯನ್ನು ಕರೆದುಕೊಂಡು ಹೋಗಿ ಕಟ್ಟಿಗೆ ಕತ್ತರಿಸಲು ಕೊಡಲಿಯನ್ನು ಹುಡುಗಿಯ ಕೈಯಲ್ಲಿ ಕೊಟ್ಟು ಆಕೆಯನ್ನು ಕಳುಹಿಸುವಂತೆ ಹೇಳಿದರು. ಇದಾದ ಬಳಿಕ ಕೊಡಲಿಯೊಂದಿಗೆ ಬಾಲಕಿ ಮರಳಿ ಬಂದಾಗ ಆಕೆಯನ್ನು ಏಕಾಂತ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಜೊತೆಗೆ ಯಾರಿಗೂ ಹೇಳದಂತೆ ಆಕೆಗೆ 10 ರೂ. ಕೊಟ್ಟು ಸಮಾಧಾನಿಸಿದ್ದಾನೆ” ಎಂದು ಆಕೆಯ ತಾಯಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೀರು ತರಲು ಹೋಗುತ್ತಿದ್ದ ಗದ್ದೆಯ ಮೂಲಕ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಏನಾಗುತ್ತಿದೆ ಎಂಬುದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಜಮಾಯಿಸಿದ ಜನರು ಬಾಲಕಿಯ ಅಜ್ಜನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ.

ಬಾಲಕಿಯ ಕುಟುಂಬ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ ಎಂದು ಗುಲ್ರಿಹಾ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ಪಾಂಡೆ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಅಜ್ಜನನ್ನು ಬಂಧಿಸಲಾಗಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

See also  ಸಂಪಾಜೆ ದರೋಡೆ ಪ್ರಕರಣದ ಆರೋಪಿ ಪೊಲೀಸರನ್ನು ದೂಡಿ ಹಾಕಿ ಎಸ್ಕೇಪ್, ಆಸ್ಪತ್ರೆಗೆಂದು ಕರೆ ತಂದ ಪೊಲೀಸರನ್ನೇ ಕಣ್ಣುಕಟ್ಟಿಸಿ ಹಾರಿ ಬಿದ್ದು ಓಡಿದ ಖದೀಮ‌ ಕೈದಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget