ಕೊಡಗುವೈರಲ್ ನ್ಯೂಸ್

2 ಬಲ್ಬ್ ಗಳಿರುವ ತಗಡಿನ ಶೆಡ್ ನಲ್ಲಿ ವಾಸಿಸುತ್ತಿರುವ 90ರ ಅಜ್ಜಿಗೆ ಬಂತು 1 ಲಕ್ಷ ರೂ.ಕರೆಂಟ್ ಬಿಲ್ !

ನ್ಯೂಸ್ ನಾಟೌಟ್ :ಇತ್ತೀಚೆಗಷ್ಟೇ ಮಂಗಳೂರಿನ ಉಳ್ಳಾಲದ ವ್ಯಕ್ತಿಗೆ ಬರೋಬ್ಬರಿ 7 ಲಕ್ಷ ಕರೆಂಟ್ ಬಿಲ್ ಬಂದಿರುವ ಬಗ್ಗೆ ವರದಿಯಾಗಿತ್ತು.ಇದೀಗ ಎರಡು ಬಲ್ಬ್ಗಳಿರುವ ತಗಡಿನ ಶೆಡ್ ನಲ್ಲಿ ವಾಸಿಸುತ್ತಿರುವ 90ರ ಅಜ್ಜಿಗೆ ಬರೋಬ್ಬರಿ 1 ಲಕ್ಷ ಬಿಲ್ ಬಂದಿರುವ ಘಟನೆ ಬಗ್ಗೆ ವರದಿಯಾಗಿದೆ.


ಹೌದು,ಅಜ್ಜಿ ಮನೆಗೆ ಜೆಸ್ಕಾಂ ಸಿಬ್ಬಂದಿ ಬಂದು 1 ಲಕ್ಷದ 3 ಸಾವಿರದ 315 ರೂ.ಬಿಲ್ ನೀಡಿದ್ದಾರೆ.ಈ ಬಿಲ್ ನೋಡಿ ಅಜ್ಜಿ ಶಾಕ್ ಆಗಿದ್ದು,ನನ್ನ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ (Electricity Bill) ಕಟ್ಟಲು ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ.ಈ ಘಟನೆ ಕೊಪ್ಪಳದಿಂದ ವರದಿಯಾಗಿದೆ.ಕೊಪ್ಪಳದ ಭಾಗ್ಯನಗರದಲ್ಲಿ ಸಣ್ಣ ತಗಡಿನ ಶೆಡ್​ನಲ್ಲಿ ವಾಸವಾಗಿರುವ 90 ವಯಸ್ಸಿನ ಗಿರಿಜಮ್ಮ ಮನೆಯಲ್ಲಿ ಎರಡು ಬಲ್ಬ್ ಇವೆ. ಆದರೂ 6 ತಿಂಗಳಲ್ಲಿ ಬರೋಬ್ಬರಿ 1 ಲಕ್ಷ ರೂ. ಬಿಲ್​ ಬಂದಿದೆ. ಈ ಅಜ್ಜಿ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಹೀಗಾಗಿ ಜೆಸ್ಕಾಂ, ಪ್ರತಿ 70 ರಿಂದ 80 ರೂ ಬಿಲ್ ನೀಡುತ್ತಿತ್ತು. ಆದ್ರೆ, ಆರು ತಿಂಗಳ ಹಿಂದೆ ವೃದ್ದೆಯ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಸಿದ್ದು, ಇದೀಗ 6 ತಿಂಗಳಲ್ಲಿ ಅಜ್ಜಿ ಮನೆಗೆ ಬರೋಬ್ಬರಿ 1,03,315 ರೂ. ವಿದ್ಯುತ್ ಬಿಲ್ ನೀಡಲಾಗಿದ್ದು, ಇದರಿಂದ ಅಜ್ಜಿ ಆತಂಕಕ್ಕೆ ಒಳಗಾಗಿದ್ದಾರೆ.

ಒಂದೊತ್ತಿನ ಊಟಕ್ಕೆ ಪರದಾಡುವ 90 ವರ್ಷದ ಅಜ್ಜಿ, ಇದೀಗ 1 ಲಕ್ಷ ರೂ. ವಿದ್ಯುತ್ ಬಿಲ್ ಹೇಗೆ ಕಟ್ಟುವುದು ಎಂದು ಕಣ್ಣೀರಿಟ್ಟಿದ್ದು,ಮೀಟರ್ ರೀಡರ್ ಎಡವಟ್ಟಿನಿಂದ ಈ ರೀತಿ ಆಗಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಮಾತನಾಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್ ಮೀಟರ್ ರೀಡರ್ ನಿಂದಾಗಿ ಈ ರೀತಿಯ ಸಮಸ್ಯೆಗಳಾಗಿರಬಹುದು.ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ.ಅದನ್ನು ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

Related posts

ಡ್ರಗ್ಸ್‌ ಖರೀದಿಸಲು ಅಪ್ಪ-ಅಮ್ಮ ಮಕ್ಕಳನ್ನೇ ಮಾರಿದರೇ..? ಮಕ್ಕಳಿಗೂ ರೇಟ್ ಫಿಕ್ಸ್ ಮಾಡಿದ್ರಾ ಹೆತ್ತವರು? ಇಲ್ಲಿದೆ ಭಯಾನಕ ಸ್ಟೋರಿ..!

ಮತ ಹಾಕಲು ಬಂದ ಶಾಸಕ ಇವಿಎಂ ನೆಲಕ್ಕೆ ಎಸೆದು ಪುಡಿ ಮಾಡಿದ್ದೇಕೆ..? ಇಲ್ಲಿದೆ ಸಿಸಿಟಿವಿಯಲ್ಲಿ ದೃಶ್ಯ..!

ಸಂಪಾಜೆ ಗ್ರಾಮದ ಸುತ್ತಮುತ್ತ ಬೆಕ್ಕಿನ ಜ್ವರ..!, ಹಲವು ಬೆಕ್ಕುಗಳು ಬಲಿ, ಬೆಕ್ಕಿನ ಜ್ವರ ಬಂದ್ರೆ ಏನು ಮಾಡಬೇಕು..? ಇಲ್ಲಿದೆ ಡಿಟೇಲ್ಸ್