ಕರಾವಳಿಕ್ರೈಂ

ಅಜ್ಜ-ಅಜ್ಜಿಯನ್ನು ಕೊಂದು ಚಿನ್ನಾಭರಣದೊಂದಿಗೆ ಮಂಗಳೂರಿಗೆ ಬಂದ ಖತರ್ನಾಕ್‌ ಮೊಮ್ಮಗ ಬಂಧನ

319

ನ್ಯೂಸ್‌ ನಾಟೌಟ್‌: ಸಾಕಿ ಸಲಹಿದ ತನ್ನ ಅಜ್ಜ-ಅಜ್ಜಿಯನ್ನು ಕೊಂದು ಆಕೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಮಾರಾಟ ಮಾಡಲು ಯತ್ನಿಸುತ್ತಿದ್ದ ಖತರ್ನಾಕ್‌ ಮೊಮ್ಮಗ ಮಂಗಳೂರಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಂಧಿತ ಆರೋಪಿಯನ್ನು ತ್ರಿಶೂರ್ ಜಿಲ್ಲೆಯ ವೈಲತ್ತೂರು ನಿವಾಸಿ ಅಹಮ್ಮದ್ ಅಕ್ಕಲ್ (27 ವರ್ಷ) ಎಂದು ಗುರುತಿಸಲಾಗಿದೆ. ಈತ ಕೇರಳದ ತ್ರಿಶೂರ್ ನಲ್ಲಿ ತನ್ನ ಅಜ್ಜ- ಅಜ್ಜಿಯ ಕೊಲೆ ಮಾಡಿ ಅವರಲ್ಲಿದ್ದ ಆಭರಣಗಳೊಂದಿಗೆ ನಾಪತ್ತೆಯಾಗಿದ್ದ.

ಮಂಗಳೂರಿಗೆ ಬಂದು ಸೋಮವಾರ ಮಂಗಳೂರಿನ ಕಾರ್ ಸ್ಟ್ರೀಟ್ ಪರಿಸರದಲ್ಲಿ ಅನುಮಾನಸ್ಪದ ಚಿನ್ನಾಭರಣ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿ ಅಹಮ್ಮದ್ ಅಕ್ಕಲ್ ಭಾನುವಾರ (ಜುಲೈ 23) ತ್ರಿಶೂರ್ ಜಿಲ್ಲೆಯ ವಡೆಕ್ಕೆಕಾಡ್ ಎಂಬಲ್ಲಿ ಜುಲೈ 23 ರಂದು ರಾತ್ರಿ ತನ್ನ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಿ ಮಂಗಳೂರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.

ಆತನ ಬಳಿಯಿಂದ ಒಂದು ಮುತ್ತಿನ ಎರಡು ಎಳೆಯ ಬಂಗಾರದ ಸರ, ಸಣ್ಣ ಪದಕವಿರುವ ಚೈನ್, ಮೂರು ಜೊತೆ ಕಿವಿಯೊಲೆ, ಐದು ಉಂಗುರ, ಎರಡು ಕೈಬಳೆ, ಪಾಸ್ ಪೋರ್ಟ್ ಹಾಗೂ ಇತರ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

See also  ಉಡುಪಿ ಹತ್ಯೆ ಪ್ರಕರಣ: ಸಿಎಂ ಸಿದ್ಧುವನ್ನು ಭೇಟಿ ಮಾಡಿದ್ದೇಕೆ ಮುಸ್ಲಿಂ ಒಕ್ಕೂಟ..? ಸಿದ್ಧರಾಮಯ್ಯ ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget