ನ್ಯೂಸ್ ನಾಟೌಟ್:ರಾಜ್ಯಾದ್ಯಂತ ಶಾಲೆಗಳು ಪ್ರಾರಂಭಗೊಂಡಿವೆ.ಮಕ್ಕಳನ್ನು ಶಿಕ್ಷಕರು ಪ್ರೀತಿಯಿಂದ ಬರಮಾಡಿಕೊಂಡ ಘಟನೆಗಳು ನಡೆದಿವೆ. ಆದರೆ ಈ ಶಾಲೆ ಮಾತ್ರ ತೀರಾ ವಿಭಿನ್ನ ಎಂಬಂತೆ ಮಕ್ಕಳನ್ನು ಆತ್ಮೀಯತೆಯಿಂದ ಬರಮಾಡಿಕೊಂಡಿದೆ. ಈ ಅಪರೂಪದ ಕ್ಷಣಕ್ಕೆ ದಕ್ಷಿಣಕನ್ನಡ ಜಿಲ್ಲೆಯ ವಿವೇಕಾನಂದ ಶಾಲೆ ಸಾಕ್ಷಿಯಾಗಿದೆ.ಇಲ್ಲಿ ಮಕ್ಕಳನ್ನು ಹಿಂದೂ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು.
ಇಲ್ಲಿ ಶಾಲೆಯ ಶಿಸ್ತು, ನಿಯಮಗಳ ಪರಿಚಯ ಕಾರ್ಯಕ್ರಮವೂ ಆಯೋಜಿಸಲಾಯಿತು. ಸಂಸ್ಕೃತಿ- ಸಂಸ್ಕಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುವ ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಮಕ್ಕಳನ್ನು ಗುರುಕುಲ ಮಾದರಿಯಲ್ಲಿ ಹಿಂದೂ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು.ಮಕ್ಕಳ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವ ಜೊತೆಗೆ ಸಿಹಿಯನ್ನು ನೀಡಿ ಅಭಿನಂದಿಸಲಾಯಿತು. ಕೇವಲ ಮೊದಲ ಬಾರಿಗೆ ಶಾಲೆಗೆ ಬಂದ ಮಕ್ಕಳನ್ನಲ್ಲದೆ, ಈ ಹಿಂದೆ ಕಲಿಯುತ್ತಿದ್ದ ಮಕ್ಕಳನ್ನೂ ಸೇರಿಸಿ ಬರಮಾಡಿಕೊಳ್ಳಲಾಗಿತ್ತು. ವಿದ್ಯಾಸಂಸ್ಥೆಯ ಎಲ್ಲಾ ಸಿಬ್ಬಂದಿ, ಶಿಕ್ಷಕ-ಶಿಕ್ಷಕಿಯರು ಮಕ್ಕಳನ್ನು ಬರಮಾಡಿಕೊಂಡರು.