ಕರಾವಳಿಸುಳ್ಯ

ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಪದವಿ ಪ್ರದಾನ ಕಾರ್ಯಕ್ರಮ

282

ನ್ಯೂಸ್ ನಾಟೌಟ್ : ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2023ನೇ ಸಾಲಿನ ಪದವಿ ಪ್ರದಾನ ಕಾರ್ಯಕ್ರಮ ಕಾಲೇಜ್ ನ ಅಡಿಟೋರಿಯಮ್ ನಲ್ಲಿ ನಡೆಯಿತು.ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷರಾದ ಡಾ| ಕೆ.ವಿ. ಚಿದಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ವೈದ್ಯಕೀಯ ಪದವಿ ಪಡೆದ ವೈದ್ಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭ ಮಾತನಾಡಿದ ಅವರು ಬದಲಾಗುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ನಾವು ನಮ್ಮ ನಿಷ್ಠೆಯನ್ನು ಮರೆಯದೇ ಬಡ ಜನರಿಗೂ ಉತ್ತಮ ಸೇವೆ ಒದಗಿಸಬೇಕು. ಅವರ ಆಶಯಕ್ಕೆ ತಕ್ಕಂತೆ ನೆರವು ನೀಡಬೇಕಾದ ದೊಡ್ಡ ಜವಾಬ್ದಾರಿ ವೈದ್ಯರದ್ದಾಗಿದೆ.ವೈದ್ಯಕೀಯ ಪದವಿ ಪಡೆದ ಕೂಡಲೇ ಉತ್ತಮ ವೈದ್ಯರಾಗಲು ಸಾಧ್ಯವಿಲ್ಲ. ವೃತ್ತಿ ಬದುಕಿನಲ್ಲಿ ಮಾಡುವ ಸೇವೆಯಿಂದ ಮಾತ್ರ ಶ್ರೇಷ್ಠ ವೈದ್ಯರಾಗಲು ಸಾಧ್ಯ.ಹೀಗಾಗಿ ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವನೆ ಬೆಳೆಸಿಕೊಂಡರೆ ಶ್ರೇಷ್ಠ ವೈದ್ಯರೆನಿಸಿಕೊಳ್ಳಲು ಸಾಧ್ಯ.ವೃತ್ತಿ ಬದುಕಿನಲ್ಲಿ ಎದುರಾಗುವ ಹಲವು ಸವಾಲುಗಳ ನಡುವೆ ನೀಡುವ ಉತ್ತಮ ಸೇವೆಯಿಂದ ಒಳ್ಳೆಯ ವೈದ್ಯರಾಗಿ ಹೆಸರು ಮಾಡಲು ಸಾಧ್ಯವಾಗುತ್ತದೆ ಎಂದು ವೈದ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಮ್.ಕೆ ರಮೇಶ್ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಪದವಿ ಪ್ರದಾನ ಮಾಡಿದರು.ಆಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. , ನಿರ್ದೇಶಕಿ ಶ್ರೀಮತಿ ಶೋಭಾ ಚಿದಾನಂದ, ಜತೆ ಕಾರ್ಯದರ್ಶಿ ಡಾ|ಐಶ್ವರ್ಯ ಕೆ.ಸಿ. , ನಿರ್ದೇಶಕರಾದ ಡಾ.ಗೌತಮ್ ಗೌಡ, ಆರ್ಥೋ ಸ್ಪೆಶಲಿಸ್ಟ್ ಡಾ|ಸುಬ್ರಹ್ಮಣ್ಯ ವೇದಿಕೆಯಲ್ಲಿದ್ದರು.

ವಿವಿಧ ವಿಭಾಗಗಳಿಂದ ರ್ಯಾಂಕ್ ವಿಜೇತರಾದ ವಿದ್ಯಾರ್ಥಿಗಳಿಗೆ ಡಾ|ಕೆವಿಜಿ ಮತ್ತು ಡಾ|ಕೆವಿಸಿ ಚಿನ್ನದ ಪ್ರದಕ ಪ್ರದಾನ ಮಾಡಲಾಯಿತು.ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ|ಸಿ.ರಾಮಚಂದ್ರ ಭಟ್, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಕಾಲೇಜ್ ನ ಡೀನ್ ಡಾ|ಲೀಲಾಂಬಿಕೈ ನಟರಾಜನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ|ನವ್ಯ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.ಡಾ|ಗ್ರೀಷ್ಮಾ,ಡಾ|ಶಿಲ್ಪಾ ಮತ್ತು ಡಾ|ಮನೋಜ್ ಗೌಡ ಕಾರ್ಯಕ್ರಮ ನಿರೂಪಿಸಿದರು.ಮೆಡಿಕಲ್ ಸೂಪರಿಡೆಂಟ್ ಡಾ|ಗೋಪಿನಾಥ್ ಪೈ ವಂದಿಸಿದರು.

ವಿಡಿಯೋ ವೀಕ್ಷಿಸಿ

See also  ಬಂಟ್ವಾಳ: ಸಲಿಂಗ ಲೈಂಗಿಕ ಕಿರುಕುಳ ನೀಡಿದ್ದ ಮದ್ರಸಾ ಅಧ್ಯಾಪಕ! 53 ವರ್ಷ ಕಠಿಣ ಸಜೆ ಮತ್ತು ದಂಡ!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget