ಕರಾವಳಿ

15 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಲಿದೆ ಒಕ್ಕಲಿಗ ಗೌಡ ಸಮುದಾಯ ಭವನ, ಡಿಸೆಂಬರ್ 26ಕ್ಕೆ ಶಿಲಾನ್ಯಾಸ ಕಾರ್ಯಕ್ರಮ,  ಜಗದ್ಗುರು ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗಿ

ನ್ಯೂಸ್ ನಾಟೌಟ್ :  ಒಕ್ಕಲಿಗ ಗೌಡ ಸಮುದಾಯದ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ಅತ್ಯಾಧುನಿಕ ಸೌಲಭ್ಯವುಳ್ಳ ಸುಮಾರು 15 ಕೋಟಿ ರೂ.  ವೆಚ್ಚದ ಗೌಡ ಸಮುದಾಯ ಭವನ, ವಿದ್ಯಾರ್ಥಿ ವಸತಿ ನಿಲಯ, ವಾಣಿಜ್ಯ ಸಂಕೀರ್ಣ ಕಡಬದಲ್ಲಿ ತಲೆ ಎತ್ತಲಿದೆ. ಸುಮಾರು 3 ಎಕರೆ ಪ್ರದೇಶದಲ್ಲಿ ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಈ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.

ಡಿಸೆಂಬರ್ 26ಕ್ಕೆ ಶಿಲಾನ್ಯಾಸ ಕಾರ್ಯಕ್ರಮ  ನಡೆಯಲಿದೆ.  ಇದೇ ವೇಳೆ ಕಡಬದಲ್ಲಿ ಒಕ್ಕಲಿಗರ ಸ್ಪಂದನ ಸಹಕಾರಿ ಸಂಘ ಕೂಡ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಜಗದ್ಗುರು ಶ್ರೀ ಪರಮಪೂಜ್ಯ ನಿರ್ಮಲನಂದನಾಥ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ  ಕಾರ್ಯಕ್ರಮದಲ್ಲಿಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ, ಮಡಿಕೇರಿ ಶಾಸಕ ಮಂತರ್ ಗೌಡ, ಶಾಸಕ ಪ್ರಿಯಾ ಕೃಷ್ಣ , ರಾಜ್ಯ ಸಭಾ ಸದಸ್ಯ ಹಾಗೂ ಸಿನಿಮಾ ನಟ ಜಗ್ಗೇಶ್, ರಾಜ್ಯ ಒಕ್ಕಲಿಗ ಸಂಘ ಅಧ್ಯಕ್ಷ  ಹನುಮಂತಯ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.  ಈ ಎಲ್ಲ ಗಣ್ಯರನ್ನು ಕಾರ್ಯಕ್ರಮಕ್ಕೆ ಒಕ್ಕಲಿಗ ಸೇವಾ ಸಂಘ ಕಡಬ  ಅಧ್ಯಕ್ಷ ಸುರೇಶ್ ಗೌಡ ಬೈಲು, ಮಂಗಳೂರು ಒಕ್ಕಲಿಗ ಯುವ ಸಂಘ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಪುತ್ಥಳಿ ಸ್ಥಾಪನಾ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಕಿರಣ್ ಹೊಸೊಳಿಕೆ, ಮಹೇಶ್ ನಡುತೋಟ  ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಾರೆ. ಶೀಘ್ರದಲ್ಲೇ ಇಡೀ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಚಿತ್ರಣ ಹೊರಬೀಳಲಿದೆ ಎಂದು ನ್ಯೂಸ್ ನಾಟೌಟ್ ಗೆ ಸಂಘಟಕರು ತಿಳಿಸಿದ್ದಾರೆ.

Related posts

ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಯು.ಟಿ ಖಾದರ್ ಹೆಸರು ಅಂತಿಮ? ಖಾದರ್ ಗೆ ಕರೆ ಮಾಡಿ ಸುರ್ಜೇವಾಲಾ ಹೇಳಿದ್ದೇನು?

ತೊಡಿಕಾನ: ಮಹಿಳೆಗೆ ಕತ್ತಿಯಿಂದ ಕಡಿದು ಪರಾರಿಯಾದ ಯುವಕ

ಅಂಧ ಗಾಯಕಿಗೆ ಒಲಿದು ಬಂತು ಸಿನಿಮಾದಲ್ಲಿ ಹಾಡುವ ಅವಕಾಶ..!ಜಗತ್ತನ್ನೇ ಕಾಣದ ಗಾಯಕಿಗೆ ಅದ್ಭುತ ಅವಕಾಶವನ್ನೇ ಸೃಷ್ಟಿಸಿದ್ರು ಖ್ಯಾತ ನಿರ್ದೇಶಕ..!